ರಣಬೀರ್ ಕಪೂರ್ ಗೆ ಇನ್ನೊಬ್ಬರ ಮೊಬೈಲ್ ಕದ್ದು ಮೆಸೇಜ್ ಓದುವ ಅಭ್ಯಾಸವಿದೆಯಂತೆ
ಮಂಗಳವಾರ, 19 ಡಿಸೆಂಬರ್ 2017 (10:56 IST)
ಮುಂಬೈ: ಬಾಲಿವುಟ್ ನ ನಟ ರಣಬೀರ್ ಕಪೂರ್ ಅವರು ಒಬ್ಬ ಮೊಬೈಲ್ ಕಳ್ಳ ಎಂದು ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರು ಆರೋಪಿಸಿದ್ದಾರೆ. ರಣಬೀರ್ ಕಪೂರ್ ಅವರು ಕರಣ್ ಜೋಹರ್ ಅವರ ಮೊಬೈಲ್ ಕದ್ದು ಅದರಲ್ಲಿರುವ ಮೆಸೇಜ್ ಗಳನ್ನು ಓದುತ್ತಿದ್ರಂತೆ. ಇದರಿಂದ ಕೋಪಗೊಂಡ ಕರಣ್ ಅವರು ಈ ರೀತಿಯಾಗಿ ಹೇಳಿದ್ದಾರೆ.
ಯಾವುದೇ ಪಾಸ್ವರ್ಡ್ ಹಾಕಿದ್ರು ಅದನ್ನು ಕಂಡುಹಿಡಿದು ಮೊಬೈಲ್ ನಲ್ಲಿರುವ ಮೆಸೇಜ್ ಓದುತ್ತಾರಂತೆ. ಬಹುಷಃ ಇವರು ಯಾವುದೊ ಪಾಸ್ವರ್ಡ್ ಕಂಡುಹಿಡಿಯುವ ಕಂಪೆನಿಯಲ್ಲಿ ಕೆಲಸ ಮಾಡುತ್ತಿರಬಹುದು ಎಂದು ಕರಣ್ ಅವರು ಹೇಳಿದ್ದಾರೆ.
ಕರಣ್ ಜೋಹರ್ ಅವರು ಬಾಲಿವುಡ್ ನ ಮಲ್ಟಿಟ್ಯಾಲೆಂಟೆಡ್ ವ್ಯಕ್ತಿಯಾಗಿದ್ದು ,ಈಗ ಇವರು ರೇಡಿಯೋ ಜಾಕಿಯಾಗಿ ಇಶ್ಕ್ 104.8 ಎಫ್.ಎಂ ನಲ್ಲಿ ಲವ್ ಗುರು ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ರಣಬೀರ್ ಕಪೂರ್ ಅವರು ಒಬ್ಬ ಮೊಬೈಲ್ ಕಳ್ಳ ಎಂದು ತಮ್ಮ ಕೋಪವನ್ನು ಹೊರಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ