4 ಜಿ ಬಳಕೆದಾರರಿಗೆ ವೊಡಾಫೋನ್, ಏರ್ ಟೆಲ್ ಬಂಪರ್ ಕೊಡುಗೆ
597 ರೂ.ಗಳಿಗೆ ಪ್ರತಿ ನಿತ್ಯ ಅನಿಯಮಿತ ಕರೆ, ಎಸ್ ಎಂಎಸ್ ಜತೆಗೆ 10 ಜಿಬಿ 4 ಜಿ ಡಾಟಾ ಒದಗಿಸುವ ಭರ್ಜರಿ ಪ್ಲ್ಯಾನ್ ನ್ನು ಏರ್ ಟೆಲ್ ಹೊರತಂದಿತ್ತು. ಈಗ ವೊಡಾಫೋನ್ ಕೂಡಾ ಅದೇ ಹಾದಿಯಲ್ಲಿದೆ.
ವೊಡಾಫೋನ್ ಕೂಡಾ 597 ರೂ.ಗಳ 4 ಜಿ ಪ್ಲ್ಯಾನ್ ಹೊರತಂದಿದ್ದು, ಇದರ ವ್ಯಾಲಿಡಿಟಿ ಸ್ಮಾರ್ಟ್ ಫೋನ್ ಗಳಿಗೆ 112 ದಿನಗಳು ಮತ್ತು ಇತರ ಫೀಚರ್ ಫೋನ್ ಗಳಲ್ಲಿ 168 ದಿನಗಳು ಇರಲಿವೆ. ಇದರಲ್ಲಿ ಪ್ರತಿ ನಿತ್ಯ 10 ಜಿಬಿ ಡಾಟಾ, ಅನಿಯಮಿತ ಕರೆ ಮತ್ತು ಉಚಿತ ಎಸ್ಎಂಎಸ್ ಕೂಡಾ ಲಭ್ಯವಿರಲಿದೆ. ಅಂತೂ ಗ್ರಾಹಕನಿಗೆ ಲಾಭವೋ ಲಾಭ.