ಎರ್‍ಟೆಲ್, ಐಡಿಯಾ ಈಗಾಗಲೆ ಹಲವು ಆಫರ್‌ಗಳನ್ನು ತನ್ನ ಗ್ರಾಹಕರಿಗೆ ಪ್ರಕಟಿಸಿದೆ. ಇದೀಗ ವೊಡಾಫೋನ್ ಸಹ ತನ್ನ ಬಳಕೆದಾರರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ರೂ. 144ಕ್ಕೆ ರೀಚಾರ್ಜ್ ಮಾಡಿಕೊಂಡರೆ ಅನಿಯಮಿತ ಕರೆಗಳನ್ನು ಮಾಡುವ ಆಫರ್ ಪ್ರಕಟಿಸಿದೆ.
ಇನ್ನು ರೂ.344ಕ್ಕೆ ರೀಚಾರ್ಜ್‍ಗೆ ಉಚಿತ ಕರೆಗಳು, ಇತರೆ ನೆಟ್‌ವರ್ಕ್‌ಗೆ ಉಚಿತ ರೋಮಿಂಗ್, 4ಜಿ ಹ್ಯಾಂಡ್‌ಸೆಟ್ ಬಳಕೆದಾರರಿಗೆ 1ಜಿಬಿ ಉಚಿತ ಡಾಟಾ ಕೊಡಲಿರುವುದಾಗಿ ವೊಡಾಫೋನ್ ಪ್ರಕಟಣೆಯಲ್ಲಿ ತಿಳಿಸಿದೆ.