ವೊಡಾಫೋನ್​ ನಿಂದ ಗ್ರಾಹಕರಿಗಾಗಿ 129 ರೂ ನ ಹೊಸ ಪ್ಲಾನ್ ಬಿಡುಗಡೆ

ಬುಧವಾರ, 3 ಜುಲೈ 2019 (08:57 IST)
ನವದೆಹಲಿ : ಏರ್ಟೆಲ್ ನ 129 ರೂ ಪ್ಲಾನ್ ಗೆ ಟಕ್ಕರ್ ನೀಡಲು ವೊಡಾಫೋನ್​ ತನ್ನ ಗ್ರಾಹಕರಿಗಾಗಿ 129 ರೂ ನ ಹೊಸ ಪ್ಲಾನ್ ನ್ನು ಬಿಡುಗಡೆ ಮಾಡಿದ್ದಾರೆ.
ಈ ಪ್ಲಾನ್ ನಲ್ಲಿ ಗ್ರಾಹಕರು ರೂ.129 ರಿಚಾರ್ಜ್​ ಮಾಡಿದರೆ 2GB ಡೇಟಾವನ್ನು ಪಡೆಯಬಹುದು. ಅಲ್ಲದೇ ಈ ಪ್ಲಾನ್​ 2G/3G/4G ನೆಟ್​​ವರ್ಕ್​ಗೆ ಅನುಗುಣವಾಗಿ ಬಳಸಬಹುದಾಗಿದೆ.


ಹಾಗೇ ಇದರಲ್ಲಿ ಅನಿಯಮಿತ ಕರೆಯನ್ನು ನೀಡುತ್ತಿದ್ದು,  ಜೊತೆಗೆ 300 SMS ​ ಉಚಿತವಾಗಿ ನೀಡುತ್ತಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ