ವೊಡಾಫೋನ್ ವಿಶೇಷ ಡಾಟಾ ಆಫರ್

ಬುಧವಾರ, 18 ಜನವರಿ 2017 (10:40 IST)
ಎಲ್ಲಾ ಟೆಲಿಕಾಂ ಕಂಪೆನಿಗಳು ತಮ್ಮ ಡಾಟಾ ಪ್ಲಾನ್‌ಗಳನ್ನು ಕಡಿತಗೊಳಿಸುತ್ತಾ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಇತ್ತೀಚೆಗೆ ಈ ಪಟ್ಟಿಗೆ ಪ್ರಮುಖ ಟೆಲಿಕಾಂ ಕಂಪೆನಿ ವೊಡಾಫೋನ್ ಸೇರ್ಪಡೆಯಾಗಿದೆ. ಮುಖ್ಯವಾಗಿ ತನ್ನ ಪ್ರೀಪೇಯ್ಡ್ ಗ್ರಾಹಕರಿಗಾಗಿ ವೊಡಾಫೋನ್ ವಿಶೇಷ ಆಫರ್ ಪ್ರಕಟಿಸಿದೆ.
 
ರೂ.150ಕ್ಕೆ ರೀಚಾರ್ಜ್ ಮಾಡುವ ಮೂಲಕ 1ಜಿಬಿ 4ಜಿ ಇಂಟರ್‌ನೆಟ್ ಪಡೆಯಬಹುದು. ಅದೇ ರೀತಿ ರೂ.1500 ಡಾಟಾ ಪ್ಯಾಕ್ ಮೂಲಕ 35ಜಿಬಿ 4ಜಿ ಡಾಟಾ ಪಡೆಯಬಹುದೆಂದು ಕಂಪೆನಿ ತಿಳಿಸಿದೆ. 1ಜಿಬಿ ಡಾಟಾ ರೂ.150, 4ಜಿಬಿ ರೂ.250, 6ಜಿಬಿ ರೂ.350, 9ಜಿಬಿ ರೂ.450, 13ಜಿಬಿ ರೂ.650, 22ಜಿಬಿ ರೂ.999, 35ಜಿಬಿ ರೂ.1,500 ಬೆಲೆಗೆ ಡಾಟಾ ಪ್ಯಾಕ್ ಕೊಡುತ್ತಿದೆ.
 
ಈ ಡಾಟಾ ಪ್ಲಾನ್‌ಗಳು ಬೆಲೆಗಳು ಸರ್ಕಲ್‌ಗಲನ್ನು ಅವಲಂಬಿಸಿ ಬದಲಾಗುತ್ತಿರುತ್ತದೆ ಎಂದು ಕಂಪೆನಿ ಹೇಳಿದೆ. ಅಷ್ಟೇ ಅಲ್ಲದೆ ಡಿಜಿಟಲ್ ಚಾನೆಲ್‌ಗಳು, ರೀಟೇಲ್ ಪಾಯಿಂಟ್‌ಗಳ ಮೂಲಕ ಖರೀದಿಸಬೇಕೆಂದು, ಯಾವುದೇ ಸಮಯದಲ್ಲಾದರೂ ಈ ಸೌಲಭ್ಯ ಪಡೆಯಬಹುದೆಂದು ತಿಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ