ಸ್ವೀಡನ್ ಮೂಲದ ಐಶಾರಾಮಿ ಕಾರು ತಯಾರಿಕಾ ಕಂಪನಿ ವೋಲ್ವೋ ಭಾರತದ ಮಾರುಕಟ್ಟೆಗೆ ಎರಡು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾಡೆಲ್ ಕಾರುಗಳನ್ನು ಬಿಡುಗಡೆ ಮಾಡಿದೆ. ಈಗಾಗಲೆ ಇರುವ ವಿ40, ವಿ40 ಕ್ರಾಸ್ ಕಂಟ್ರಿ ಮಾಡೆಲ್ ಕಾರುಗಳಿಗೆ ಮತ್ತಷ್ಟು ಫೀಚರ್‌ಗಳನ್ನು ಸೇರಿಸಿ ಈ ಪ್ರೀಮಿಯಂ ಕಾರುಗಳನ್ನು ಮಾರುಕಟ್ಟೆಗೆ ತಂದಿದೆ.
ಈ ಎರಡೂ ಆವೃತ್ತಿಗಳಲ್ಲಿ 2 ಲೀಟರ್ ಡೀಸೆಲ್ ಇಂಜಿನ್, ಸಿಕ್ಸ್ ಸ್ಪೀಡ್ ಆಟೋಮೇಟಿಕ್ ಫೋರ್ ವೀಲ್ ಡ್ರೈವ್ ಸೌಲಭ್ಯಗಳಿವೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಕನಿಷ್ಠ ಶೇ.10ರಷ್ಟು ಮಾರುಕಟ್ಟೆ ಪಾಲು ಪಡೆಯುವ ಗುರಿಯೊಂದಿಗೆ ವೋಲ್ವೋ ಮುಂದಡಿಯಿಟ್ಟಿದೆ.