ನೋಕಿಯಾ ಫೋನ್ ಅಭಿಮಾನಿಗಳಿಗೆ ಶುಭಸುದ್ದಿ

ಶುಕ್ರವಾರ, 3 ಮಾರ್ಚ್ 2017 (15:49 IST)
ಮೊಬೈಲ್ ವರ್ಲ್ಡ್ ಕಾಂಗ್ರೆಸ್ (ಎಂಡಬ್ಲ್ಯುಸಿ) ಸಂದರ್ಭದಲ್ಲಿ ಅತ್ಯಧಿಕ ಮಂದಿಯನ್ನು ಆಕರ್ಷಿಸಿದ ಫೀಚರ್ ಫೋನ್ ನೋಕಿಯಾ 3310. ಈ ಫೊನ್‌ನೊಂದಿಗೆ ಎಚ್‌ಎಂಡಿ ಗ್ಲೋಬಲ್ ನೋಕಿಯಾ 3, ನೋಕಿಯಾ 5, ನೋಕಿಯಾ 6 ಫೋನ್‌ಗಳನ್ನು ಬಿಡುಗಡೆ ಮಾಡಿದೆ. 
 
ಈ ನಾಲ್ಕು ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಎಚ್ಎಂಡಿ ಗ್ಲೋಬಲ್ ಇಂಡಿಯಾ ಸಂಸ್ಥೆ ಉಪಾಧ್ಯಕ್ಷ ಅಜಯ್ ಮೆಹ್ತಾ ತಿಳಿಸಿದ್ದಾರೆ. ಹೊಸ ನೋಕಿಯಾ ಫೋನ್‌ಗಳನ್ನು ಮೇ ತಿಂಗಳ ಕೊನೆಗೆ ಅಥವಾ ಜೂನ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದೇವೆ ಎಂದಿದ್ದಾರೆ.
 
ಮುಖ್ಯವಾಗಿ 3310 ಬಿಡುಗಡೆ ದಿನಾಂಕದ ಬಗ್ಗೆ ಸದ್ಯಕ್ಕೆ ಚರ್ಚೆ ನಡೆಯುತ್ತಿದೆ. ಆದರೆ ಆಂಡ್ರಾಯ್ಡ್ ಫೋನ್‌ಗಳಿಗಿಂತಲೂ ಮುಂಚೆ ಇದನ್ನು ಭಾರತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಎಲ್ಲಾ ಫೋನ್‌ಗಳನ್ನೂ ಭಾರತದಲ್ಲಿ ತಯಾರಿಸುತ್ತೇವೆಂದು, ಫಾಕ್ಸ್‌ಕಾನ್ ಜತೆಗೆ ಕೈಜೋಡಿಸಿ ಕೆಲಸ ಮಾಡುವ ಮೂಲಕ ಇದು ಸಾಧ್ಯವಾಗಲಿದೆ ಎಂದಿದ್ದಾರೆ.
 
ನೋಕಿಯಾ 3310 ವಿಶೇಷತೆಗಳು
* 2.4 ಇಂಚಿನ ಪರದೆ
* 2ಜಿ, ನೋಕಿಯಾ ಸೀರೀಸ್ 30 ಓಎಸ್
* 16 ಎಂಬಿ ಆಂತರಿಕ ಮೆಮೊರಿ
* 32ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾದ ಸಾಮರ್ಥ್ಯ
* 2 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 1200 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ