ವಾಟ್ಸಾಪ್ ನಿಂದ ವಿಡಿಯೋ ಕರೆ: ಸ್ವಲ್ಪ ದಿನ ವೇಟ್ ಮಾಡಿ

ಸೋಮವಾರ, 24 ಅಕ್ಟೋಬರ್ 2016 (13:13 IST)

ಬೆಂಗಳೂರು: ತಂತ್ರಜ್ಞಾನ ದಿನದಿಂದ ದಿನಕ್ಕೆ ಅಪ್ಡೇಟ್ ಆಗ್ತಾನೆ ಇರ್ತವೆ. ದಿನ ಬೆಳಗಾದರೆ ಸಾಕು ನವ ನಾವಿನ್ಯದ ಆ್ಯಪ್ ಗಳು ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಅದರಲ್ಲೂ ವಾಟ್ಸಾಪ್ ವಾರಕ್ಕೆ, ತಿಂಗಳಿಗೊಮ್ಮೆ ಎನ್ನುವಂತೆ ಅಪ್ಡೇಟ್ ಮಾಡ್ತಾ ಗ್ರಾಹಕರ ಇಚ್ಛೆಯನ್ನು ಸಮರ್ಪಕವಾಗಿ ಈಡೇರಿಸ್ತಾ ಇದೆ.
 


 

ಹೌದು... ಈಗ ವಾಟ್ಸಾಪ್ ಗ್ರಾಹಕರಿಗೆ ವಿಡಿಯೋ ಕರೆ ಸೌಲಭ್ಯ ನೀಡಲು ಮುಂದಾಗಿದೆ. ಸದ್ಯಕ್ಕೆ ಈ ವೈಶಿಷ್ಟ್ಯ ಬೀಟಾ ಟೆಸ್ಟಿಂಗ್ ಹಂತದಲ್ಲಿದ್ದು ಅಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರಿಗೂ ಈ ವ್ಯವಸ್ಥೆ ಅಪ್ಡೇಟ್ ಮೂಲಕ ಲಭ್ಯವಾಗಲಿದೆ. ಸ್ವಾನಿಷ್ ಅಂತರ್ಜಾಲದ ಮೂಲಕ ಈ ಮಾಹಿತಿ ಬಹಿರಂಗವಾಗಿದ್ದು, ಶೀಘ್ರವೇ ಗ್ರಾಹಕರ ಬಳಕೆಗೆ ಈ ನೂತನ ಅಪ್ಡೇಟ್ ವರ್ಶನ್ ಮಾರುಕಟ್ಟೆಗೆ ಬರಲಿದೆ ಎನ್ನಲಾಗುತ್ತಿದೆ.

 

ವಾಟ್ಸಾಪ್ ಕರೆ ಮಾಡುವ ಸಂದರ್ಭದಲ್ಲಿ ಬಳಕೆದಾರರಿಗೆ ಧ್ವನಿ ಮತ್ತು ವಿಡಿಯೋ ಕರೆಯ ಆಯ್ಕೆಯನ್ನು ಮುಂದಿಡಲಾಗುತ್ತದಂತೆ. ಧ್ವನಿ ಕರೆ ವ್ಯವಸ್ಥೆ ಈಗಾಗಲೇ ಲಭ್ಯವಿದೆ. ವಿಡಿಯೋ ಕರೆ ಮೂಲಕ ವಿಡಿಯೋ ಚಾಟಿಂಗ್ ನಡೆಸುವ ಅವಕಾಶವಿದೆ. ಇದರಲ್ಲಿ ಮುಂಭಾಗದ ಹಾಗೂ ಹಿಂಭಾಗದ ಕ್ಯಾಮರಾಗಳನ್ನು ಬದಲಾಯಿಸುವ ಆಯ್ಕೆಯನ್ನು ಸಹ ಬಳಕೆದಾರರಿಗೆ ಕಲ್ಪಿಸಲಾಗುತ್ತದೆ. ಜೊತೆಗೆ ಕರೆಯನ್ನು ಮ್ಯೂಟ್ ಮಾಡುವ ಅವಕಾಶ, ತಪ್ಪಿಹೋದ ಕರೆಗಳಿಗೆ ಸೂಚನೆ ದೊರೆಯಲಿದೆ. ವಾಟ್ಸಾಪ್ ಲ್ಲಿ ವಿಡಿಯೋ ಕರೆ ಮಾಡುವ ತುಡಿತವಿದ್ದವರೂ ಇನ್ನು ಸ್ವಲ್ಪ ದಿನ ಕಾಯಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ