ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ಆ್ಯಪ್‌ಗಳ ಮೇಲೆ ನಿಷೇಧ ಹೇರಲಾಗುವುದೇ?
ಶನಿವಾರ, 25 ಆಗಸ್ಟ್ 2018 (12:52 IST)
ನವದೆಹಲಿ : ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡುತ್ತಿರುವ ಕಾರಣ ಅವುಗಳ ಮೇಲೆ ನಿಷೇಧ ಹೇರಲಾಗುವುದು ಎಂಬ ಮಾತು ಕೇಳಿಬಂದಿತ್ತು.
ಆದರೆ ಈ ಕುರಿತು ಮಾತನಾಡಿದ ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಅರುಣ ಸುಂದರರಾಜನ್, ‘ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ಆ್ಯಪ್‌ಗಳ ಮೇಲೆ ನಿಷೇಧ ಹೇರುವ ಪ್ರಸ್ತಾಪ ಸರಕಾರಕ್ಕಿಲ್ಲ. ಆದರೆ ಇವುಗಳ ದುರ್ಬಳಕೆಯನ್ನು ತಡೆಗಟ್ಟಲು ಕೆಲವು ತಾಂತ್ರಿಕ ಉಪಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ವದಂತಿಗಳನ್ನು ಹರಡುವುದು, ಅವಹೇಳನಕರ ಹಾಗೂ ಸಮಾಜದ ಶಾಂತಿ ಭಂಗಕ್ಕೆ ಆಸ್ಪದವಾಗುವಂಥ ಪ್ರಚೋದನಾತ್ಮಕ ಪೋಸ್ಟ್ ಇತ್ಯಾದಿಗಳು ಪ್ರಸಾರವಾಗದಂತೆ ತಡೆಯಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರ್ಗದರ್ಶಿ ರೂಪಿಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ