ಕ್ಸಿಯೋಮಿ ಸಂಸ್ಥೆಯಿಂದ ಅತ್ಯಾಧುನಿಕ ಕ್ಯೂಐಸೈಕಲ್‌ ಮಾರುಕಟ್ಟೆಗೆ ಬಿಡುಗಡೆ

ಶುಕ್ರವಾರ, 24 ಜೂನ್ 2016 (18:33 IST)
ಚೀನಿ ತಂತ್ರಜ್ಞಾನದ ದೈತ್ಯ ಕ್ಸಿಯೋಮಿ ಸಂಸ್ಥೆ ಫೋಲ್ಡೇಬಲ್‌ ವಿದ್ಯುತ್ ಸ್ಮಾರ್ಟ್ ಬೈಕ್ ಕ್ಯೂಐಸೈಕಲ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
 
ಚೀನಾದಲ್ಲಿ ಆಯೋಜಿಸಿದ ಕಾರ್ಯಕ್ರಮಂದಲ್ಲಿ ದೈತ್ಯ ಕ್ಸಿಯೋಮಿ ಸಂಸ್ಥೆ ಸಿದ್ಧ ಪಡಿಸಿರುವ ಕ್ಸಿಯೋಮಿ ಎಮ್‌ಐ ಸ್ಮಾರ್ಟ್ ಬೈಕ್ ಬಿಡುಗಡೆಗೊಳಿಸಲಾಗಿದ್ದು ಗ್ರಾಹಕರಿಗೆ ಸುಮಾರು ಮೂವತ್ತು ಸಾವಿರ ರೂಪಾಯಿಗಳಲ್ಲಿ ಲಭ್ಯವಾಗಲಿದೆ.
 
ಪ್ರಸಕ್ತವಾಗಿ ಈ ಸ್ಮಾರ್ಟ್ ಬೈಕ್ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದ್ದು, ವಿಶ್ವದ ಬೇರೆ ಯಾವ ದೇಶಗಳಲ್ಲಿಯೂ ಲಭ್ಯವಿರುವುದಿಲ್ಲ. ಕ್ಯೂಐಸೈಕಲ್‌ ಎಲೆಕ್ಟ್ರಿಕ್ ಫೋಲ್ಡಿಂಗ್ ಬೈಕ್ ಕಾರ್ಬನ್ ಫೈಬರ್ ಬಳಸಿಕೊಂಡು ಸಿದ್ಧಪಡಿಸಲಾಗಿದ್ದು, ಈ ಬೈಕ್ ಕೇವಲ 14.5 ಕಿಲೋಗ್ರಾಮ್ ತೂಕ ಹೊಂದಿದೆ.
 
ಇದು ಸ್ಮಾರ್ಟ್ ಬೈಕ್ ಆಗಿದ್ದರೂ ಸಹ, ಪ್ರಸ್ತುತ ಪ್ರವಾಸದ ದೂರ ಅಥವಾ ಕ್ರಮಿಸಿದ ಒಟ್ಟಾರೆ ದೂರ, ಮೈಲೆಜ್, ಶಾಖ ಬಳಕೆ ಮತ್ತು ಬ್ಯಾಟರಿ ಸಾಮರ್ಥ್ಯವನ್ನು ಸಂಗ್ರಹಿಸುವಂತಹ ವಿಭಿನ್ನ ಡೇಟಾ ಪಾಯಿಂಟ್‌ಗಳನ್ನು ಹೊಂದಿದೆ.
 
ಕ್ಯೂಐಸೈಕಲ್‌ ಎಲೆಕ್ಟ್ರಿಕ್ ಫೋಲ್ಡಿಂಗ್ ಬೈಕ್ ದೊಡ್ಡ ಪ್ಯಾನಾಸಾನಿಕ್ ಲಿಥಿಯಂ 18650 ಎಮ್‌ಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 3-ಸ್ಪೀಡ್ ಟ್ರಾನ್ಸ್ಮಿಷನ್ ವೈಶಿಷ್ಟ್ಯ ಹೊಂದಿದೆ.
 
ಕ್ಯೂಐಸೈಕಲ್‌ ಎಲೆಕ್ಟ್ರಿಕ್ ಫೋಲ್ಡಿಂಗ್ ಬೈಕ್ ಮೂಲಕ 40-50 ಕಿಲೋಮೀಟರ್ ದೂರ ಪ್ರಯಾಣ ಕ್ರಮಿಸಲಿದ್ದು, ಈ ಬೈಕ್ ಅಪಘಾತಗಳನ್ನು ತಡೆಯಲು ಸಹಾಕಾರಿಯಾಗಿದೆ. ಇದು ಆ್ಯಪ್ ಮೂಲಕ ದೂರ, ವೇಗ, ಜಿಪಿಎಸ್ ಸ್ಥಳ, ಕ್ಯಾಲೊರಿ ಬರ್ನಡ್ ಮತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ