ಚೀನಾ ಮೊಬೈಲ್ ದಿಗ್ಗಜ ಎಂಐನಿಂದ ಮ್ಯಾಕ್ಸ್ 2 ಹೆಸರಿನ ಹೊಸ ಫೋನ್ ಮಾರುಕಟ್ಟೆಗೆ ದಾಂಗುಡಿ ಇಡಲಿದೆ. 5,000 ಎಂಎಎಚ್ ಬ್ಯಾಟರಿ ಸಾಮರ್ಥ್ಯ, 128 ಜಿಬಿ ಆಂತರಿಕ ಮೆಮೊರಿ, ವೇಗವಾಗಿ ಕಾರ್ಯನಿರ್ವಹಿಸಲು ಕ್ವಾಲ್ಕಮ್ ಸ್ನಾಪ್‌ಡ್ರ್ಯಾಗನ್ 660 ಪ್ರೋಸೆಸರ್, 6ಜಿಬಿ ರ‍್ಯಾಮ್‌ನೊಂದಿಗೆ ಬರಲಿದೆ.
ಎಂಐ ಫೋನ್ ಮಾರುಕಟ್ಟೆ ಬಿಡುಗಡೆಯಾಗುತ್ತಿದೆ ಎಂದರೆ ಕ್ಷಣ ಮಾತ್ರದಲ್ಲಿ ಲಕ್ಷ ಫೋನ್‌ಗಳು ಮಾರಾಟವಾಗುತ್ತವೆ. ಆಕರ್ಷಕವಾಗಿ, ವಿಶೇಷತೆಗಳೊಂದಿಗೆ ಬರುತ್ತಿರುವ ಮ್ಯಾಕ್ಸ್ 2 ಏನೆಲ್ಲಾ ದಾಖಲೆ ಮಾಡಲಿದೆ ಎಂಬುದನ್ನು ಕಾದುನೋಡಬೇಕು. ಇದರ ಬೆಲೆ ರೂ.20,000ದವರೆಗೂ ಇರಲಿದೆ ಎನ್ನುತ್ತವೆ ಮೂಲಗಳು.