ಶಿಯೋಮಿಯಿಂದ ಹೊಸ ನೋಟ್ 4ಎಕ್ಸ್ ಫೋನ್

ಗುರುವಾರ, 29 ಡಿಸೆಂಬರ್ 2016 (10:07 IST)
ಭಾರತ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದಂತ ಛಾಪು ಮೂಡಿಸಿರುವ ಚೀನಾ ಮೊಬೈಲ್ ತಯಾರಿ ಕಂಪನಿ ಶಿಯೋಮಿ ಇದೀಗ ಹೊಸ ಫೋನನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ. ಈಗಾಗಲೆ ರೆಡ್‍ಮಿ ನೋಟ್ 3, ರೆಡ್‍ಮಿ 3ಎಸ್ ಪ್ರೈಮ್ ಹೆಸರಿನ ಅತ್ಯಾಧುನಿಕ ಸೌಲಭ್ಯಗಳುಳ್ಳ ಫೋನ್‌ಗಳನ್ನು ಹೊರತಂದಿದೆ.
 
ಈಗ ರೆಡ್‌ಮಿ 4ಎಕ್ಸ್ ಹೆಸರಿನ ಮತ್ತೊಂದು ಹೊಸ ಫೋನನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೆ ಚೀನಾದಲ್ಲಿ ನೋಟ್ 4ನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಜನವರಿ ವೇಳೆಗೆ ಭಾರತ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಇದರ ಮುಂದಿನ ಆವೃತ್ತಿ 4ಎಕ್ಸ್ ಸಹ ಶೀಘ್ರದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ.
 
ಕಂಪನಿ ಅಧಿಕೃತವಾಗಿ ಈ ಬಗ್ಗೆ ಯಾವುದೇ ಪ್ರಕಟಣೆ ನೀಡದ್ದರೂ 4ಎಕ್ಸ್‌ಗೆ ಸಂಬಂಧಿಸಿದ ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಅತ್ಯಾಧುನಿಕ ಸ್ನಾಪ್‌ಡ್ರ್ಯಾಗನ್ 653 ಪ್ರೋಸೆಸರ್ 4ಎಕ್ಸ್‌ನಲ್ಲಿ ಬಳಸಿದ್ದಾರೆ. 4ಜಿಬಿ ರ್ಯಾಮ್ ಜೊತೆಗೆ 64 ಜಿಬಿ ಇಂಟರ್‌ನಲ್ ಮೆಮೊರಿ ಇದರ ವಿಶೇಷಗಳು. 
 
ಉಳಿದ ವಿಶೇಷಗಳನ್ನು ನೋಡಿದರೆ 5.5 ಇಂಚು ಫುಲ್ ಎಚ್‍ಡಿ ಸ್ಪರ್ಶಸಂವೇದಿ ಪರದೆ, 4100 ಎಂಎಎಚ್ ಬ್ಯಾಟರಿ, ಆಂಡ್ರಾಯ್ಡ್ 6.0 ಮಾರ್ಷ್‌ಮೆಲ್ಲೋ ಓಎಸ್ ಈ ಫೋನ್ ವಿಶೇಷಗಳು. ಮೂರು ಬಣ್ಣಗಳಲ್ಲಿ ಲಭ್ಯವಾಗಲಿದೆ. ಬೆಲೆ ಸುಮಾರು ರೂ.12 ಸಾವಿರದಿಂದ ರೂ.15 ಸಾವಿರ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ