ಏರ್‌ಇಂಡಿಯಾ ಪ್ರಯಾಣ ದರ ಏರಿಕೆ

ಇಳಯರಾಜ

ಮಂಗಳವಾರ, 26 ಜೂನ್ 2007 (11:30 IST)
ಕತಾರ್‌ನಿಂದ ಭಾರತಕ್ಕೆ ಪ್ರಯಾಣಿಸುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕರು 40 ಪ್ರತಿಶತ ಹೆಚ್ಚಳ ದರವನ್ನು ಪಾವತಿಸಬೇಕಾಗುತ್ತದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ರಜಾ ಸೀಸನ್ ಆಗಿರುವುದರಿಂದ ಬುಕಿಂಗ್ ಹೆಚ್ಚಳವಾಗಿದ್ದು, ಜೂನ್ 28ರ ದೋಹಾ- ಮಂಗಳೂರು ಟಿಕೆಟ್ ದರ 1100 ರಿಯಾಲ್(ರೂ.12,335)ತಲುಪಿದೆ. ಸಾಮಾನ್ಯ ಅವಧಿಯಲ್ಲಿ ಇದು 600 ರಿಯಲ್ ಆಗಿತ್ತು ಎಂದು ಮೂಲಗಳು ತಿಳಿಸಿವೆ.

ಕೇರಳಕ್ಕೆ ಜುಲೈ 15ರವರೆಗೆ ಮುಂಗಡ ಬುಕ್ಕಿಂಗ್ ಅಂತಿಮಗೊಂಡಿದ್ದು, ಮುಂಬಯಿ ಹಾಗೂ ಮಂಗಳೂರಿಗೆ ಜುಲೈ 8ರವರೆಗೆ ಬುಕ್ಕಿಂಗ್ ಭರ್ತಿಯಾಗಿದೆ.

ಕೇರಳಕ್ಕೆ ಪ್ರಯಾಣಿಸುವ ಪ್ರಯಾಣಿಕರ ಏರಿಕೆಯಿಂದಾಗಿ ನಾಲ್ಕು ಹೆಚ್ಚುವರಿ ವಿಮಾನಗಳನ್ನು ಬಿಡಲಾಗುತ್ತಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ ಹಾಗೂ ಮಂಗಳೂರಿಗೆ ಜೂ 24ರಿಂದ ಜೂ 10 ರವರೆಗೆ ಶೇ90 ರಿಂದ 95ರಷ್ಟು ಪ್ರಯಾಣಿಕರ ಹೆಚ್ಚಳವಾಗಬಹುದು ಎಂದು ಏರ್ ಇಂಡಿಯಾ ತಿಳಿಸಿದೆ.

ವೆಬ್ದುನಿಯಾವನ್ನು ಓದಿ