ಝೂಲಿಕ್ : ವಿಶ್ವ ಬ್ಯಾಕ್ ಅನುಮೋದನೆ

ಇಳಯರಾಜ

ಮಂಗಳವಾರ, 26 ಜೂನ್ 2007 (13:29 IST)
ವಿಶ್ವ ಬ್ಯಾಂಕ್ ನೂತನ ಅಧ್ಯಕ್ಷರಾಗಿ ರಾಬರ್ಟ್ ಝೂಲಿಕ್ ಅವರ ನೇಮಕಕ್ಕೆ ವಿಶ್ವಬ್ಯಾಂಕ್ ಅಡಳಿತ ಮಂಡಳಿ ಅನುಮೋದನೆ ನೀಡಿದೆ.

ರಾಬರ್ಟ್ ಝೂಲಿಕ್ (53) ಗಾಡಮನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಪೌಲ್ ವೂಲ್ಫೋವಿಜ್ ಅವರ ಆಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಮೆರಿಕದ ರಾಯಭಾರಿಯಾಗಿ ವ್ಯಾಪಾರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ ಅನುಭವ ಪಡೆದಿದ್ದಾರೆಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ.

ಪೌಲ್ ವೂಲ್ಫೋವಿಜ್ ಅವರು ತಮ್ಮ ಪ್ರೇಮಿಗೆ ಕಾನೂನನ್ನು ಉಲ್ಲಂಘಿಸಿ ಸಂಬಳ ಮತ್ತು ಬಡ್ತಿಯನ್ನು ನೀಡಿದ ಹಗರಣ ಹೊರಬಂದ ಹಿನ್ನಲೆಯಲ್ಲಿ ಪೌಲ್ ವೂಲ್ಫೋವಿಜ್ ರಾಜೀನಾಮೆ ನೀಡಿದ್ದರಿಂದ ಆಯ್ಕೆ ಸುಗಮವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಮಾಜಿ ರಾಯಭಾರಿಯಾಗಿ ವ್ಯಾಪಾರ ಕ್ಷೇತ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಐದು ವರ್ಷಗಳ ಅವಧಿಗೆ 11ನೇಯ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತೆಂದು ಮೂಲಗಳು ತಿಳಿಸಿವೆ.

ಅಧಿಕಾರ ವಹಿಸಿಕೊಂಡ ನಂತರ 185 ದೇಶಗಳ ವ್ಯಾಪ್ತಿಯನ್ನು ಹೊಂದಿರುವ ದೇಶಗಳ ಬಡತನ ನಿರ್ಮೂಲನೆಗಾಗಿ ಕಾರ್ಯಕ್ರಮ ರೂಪಿಸಲಾಗುವುದು. ವಿಶೇಷವಾಗಿ ಆಫ್ರಿಕಾದಲ್ಲಿ ಸಾಮಾಜಿಕ , ಆರ್ಥಿಕ, ಅಭಿವೃದ್ಧಿ ಅಭಿವೃದ್ಧಿಯಲ್ಲಿ ಹಣ ಹೂಡಿಕೆ ಆಶಾಭಾವನೆ, ಅವಕಾಶ ಒದಗಿಸುವ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ಕಾರ್ಯನಿರ್ವಹಿಸುತ್ತದೆ ಎಂದು ರಾಬರ್ಟ್ ಝೂಲಿಕ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ