ಬೆಂಗಳೂರು: ನಟ ಪ್ರಭಾಸ್ ನಟನೆಯ 'ಕಲ್ಕಿ 2898 AD' ಚಿತ್ರ ಅನೌನ್ಸ್ ಆದ ದಿನದಿಂದಲೂ ಸುದ್ದಿಯಲ್ಲಿದ್ದು, ಇದೀಗ ಚಿತ್ರದ ತಯಾರಕರು ಮುಂಬೈನಲ್ಲಿ ಗ್ರ್ಯಾಂಡ್ ಆಗಿ ಟ್ರೈಲರ್ ಲಾಂಚ್ ಮಾಡಲು ಯೋಚಿಸುತ್ತಿದ್ದಾರೆ.
ಈಗಾಗಲೇ ಚಿತ್ರ ಭಾರೀ ಕುತೂಹಲ ಮೂಡಿಸುತಿದ್ದು , ಚಿತ್ರದ ಯಶಸ್ವಿಗೆ ನಿರ್ಮಾಪಕರು ನಾನಾ ರೀತಿಯಲ್ಲಿ ಮಾರ್ಕೆಂಟಿಗ್ ಮಾಡುತ್ತಿದ್ದಾರೆ. ಚಿತ್ರದ ಹಲವಾರು ಹೊಸ ಪೋಸ್ಟರ್ಗಳನ್ನು ಹಂಚಿಕೊಂಡ ನಂತರ, ಚಿತ್ರದ ಎರಡು ಪ್ರಮುಖ ಪಾತ್ರಗಳಾದ ಭೈರವ ಮತ್ತು ಬುಜ್ಜಿಯ ಅನಿಮೇಟೆಡ್ ಸರಣಿಯನ್ನು ಸಹ ಪ್ರಾರಂಭಿಸಲಾಯಿತು. ಈ ಸರಣಿಯ ನಂತರ ಚಿತ್ರದ ಬಗ್ಗೆ ಜನರಲ್ಲಿ ಕುತೂಹಲ ಇನ್ನಷ್ಟು ಹೆಚ್ಚಿದೆ.
ಕಲ್ಕಿ 2898 AD ಟ್ರೈಲರ್ ಅನ್ನು ಮುಂಬೈನಲ್ಲಿ ಬಿಡುಗಡೆ ಮಾಡಬಹುದು
ಕಲ್ಕಿ 2898 AD ಭಾರತೀಯ ಸಂಸ್ಕೃತಿಯನ್ನು ಆಧರಿಸಿದ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರವಾಗಿದೆ. ವರದಿಗಳ ಪ್ರಕಾರ, ಈ ಚಿತ್ರದ ನಿರ್ಮಾಪಕರು ಮುಂಬೈನಲ್ಲಿ ಟ್ರೇಲರ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜೂನ್ 7 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಬಹುದು, ಆದರೆ ಅಧಿಕೃತವಾಗಿ ಇನ್ನೂ ಘೋಷಿಸಲಾಗಿಲ್ಲ.
ಚಿತ್ರದ ಬಗ್ಗೆ
ಬಿಗ್ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಮತ್ತು ದಿಶಾ ಪಟಾನಿ ಮುಂತಾದ ಸೂಪರ್ಸ್ಟಾರ್ಗಳು ಅಭಿನಯಿಸಿದ್ದಾರೆ.
ಇದು ಪ್ಯಾನ್-ಇಂಡಿಯಾ ಚಿತ್ರವಾಗಿದ್ದು, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಜೂನ್ 27, 2024 ರಂದು ಬಿಡುಗಡೆಯಾಗಲಿದೆ. ಚಿತ್ರದ ಬಜೆಟ್ 600 ಕೋಟಿ ಎಂದು ಹೇಳಲಾಗುತ್ತದೆ. ವೈಜಯಂತಿ ಮೂವೀಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.