‘ಅಗ್ನಿಸಾಕ್ಷಿ’ ಧಾರವಾಹಿಯ ಇಶಿತಾ ವರ್ಷಾ ಹೊಸ ಅವತಾರ ನೋಡಿ ಪ್ರೇಕ್ಷಕರು ಶಾಕ್!

ಮಂಗಳವಾರ, 25 ಡಿಸೆಂಬರ್ 2018 (09:17 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ಮಾಯ ಅಲಿಯಾಸ್ ಇಶಿತಾ ವರ್ಷಾ ಹೊಸ ಲುಕ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.


ಇಶಿತಾ ಕೆಲವೊಂದು ಸಿನಿಮಾದಲ್ಲೂ ಸಣ್ಣ ಪುಟ್ಟ ಪಾತ್ರ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ‘ಸ್ವಾರ್ಥ ರತ್ನ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.

ಆದರೆ ಆ ಸಿನಿಮಾದ ಹಾಡೊಂದು ಇದೀಗ ವೈರಲ್ ಆಗಿದೆ. ಅದರಲ್ಲಿ ರೆಟ್ರೋ ಲುಕ್ ನಲ್ಲಿರುವ ಈ ಹಾಡು ಯೂ ಟ್ಯೂಬ್ ನಲ್ಲಿ ಹಿಟ್ ಆಗಿದ್ದು, ಸಾಕಷ್ಟು ಲೈಕ್ಸ್ ಪಡೆದಿವೆ. ನಿನ್ನ ನಯನ ಎಂದು ಶುರುವಾಗುವ ಹಾಡಿನಲ್ಲಿ ಇಶಿತಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹಳೇ ಸಿನಿಮಾಗಳಲ್ಲಿ ನಾಯಕ-ನಾಯಕಿ ಮರ ಸುತ್ತುವ ಲವ್ ಸಾಂಗ್ ನಂತೇ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಹೊಸಬರ ತಂಡ ಮಾಡಿದ ಈ ಸಿನಿಮಾದಲ್ಲಿ ಇಶಿತಾಗೆ ಆದರ್ಶ್ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ