ಕೆಜಿಎಫ್ ಗಿಂತಲೂ ದೊಡ್ಡ ಸಂತೋಷ ನನಗೆ ಮನೆಗೆ ಹೋದಾಗ ಈಗ ಸಿಗ್ತಿದೆ ಎಂದು ಯಶ್ ಹೇಳಿದ್ದೇಕೆ?!
ಇದೇ ತಿಂಗಳು ಯಶ್-ರಾಧಿಕಾ ದಂಪತಿಗೆ ಹೆಣ್ಣು ಮಗುವಾಗಿತ್ತು. ಆ ಮುದ್ದು ಮಗಳೇ ನನ್ನ ಖುಷಿಗೆ ಕಾರಣ ಎಂದು ಯಶ್ ಅಮೆರಿಕಾ ಮೂಲದ ಯೂ ಟ್ಯೂಬ್ ಚಾನೆಲ್ ಒಂದರ ಸಂದರ್ಶಕರ ಬಳಿ ಹೇಳಿಕೊಂಡಿದ್ದಾರೆ.
‘ಎಷ್ಟೇ ಕೆಲಸವಿದ್ದರೂ ಮನೆಗೆ ಹೋಗುವಾಗ ನನಗಾಗಿ ಒಬ್ಬ ಪುಟ್ಟ ದೇವತೆ ಕಾಯುತ್ತಿರುತ್ತಾಳೆ. ಅವಳ ಜತೆ ನಾನು ಆಟ ಆಡಬಹುದು ಎಂಬುದೇ ನನಗೆ ಅತ್ಯಂತ ಖುಷಿ ಕೊಡುವ ವಿಚಾರ. ಅವಳು ನಂಗೆ ಒಂಥರಾ ಅದೃಷ್ಟ ದೇವತೆ’ ಎಂದು ಯಶ್ ಹೇಳಿಕೊಂಡಿದ್ದಾರೆ.