ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ 100 ದಿನ: ಟ್ವಿಟರ್ ನಲ್ಲಿ ಈಗಲೇ ಟ್ರೆಂಡ್ ಶುರು

ಶುಕ್ರವಾರ, 1 ಅಕ್ಟೋಬರ್ 2021 (09:00 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ 100 ದಿನಗಳ ಮೊದಲೇ ಇನ್ನೂ 100 ದಿನ ಬಾಕಿಯಿದ್ದು, ಟ್ವಿಟರ್ ನಲ್ಲಿ ಅಭಿಮಾನಿಗಳು ಈಗಲೇ ಟ್ರೆಂಡ್ ಶುರು ಮಾಡಿದ್ದಾರೆ.


ಜನವರಿ 8 ಕ್ಕೆ ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಇದೆ. ಇದಕ್ಕೆ ಇನ್ನೂ ಮೂರು ತಿಂಗಳು ಬಾಕಿಯಿದೆ. ಆದರೆ ಅಭಿಮಾನಿಗಳ ಪಾಲಿಗೆ ಈಗಲೇ ಹಬ್ಬ ಶುರುವಾಗಿದೆ.

ಕಳೆದ ಬಾರಿ ಕೊರೋನಾ ಕಾರಣದಿಂದ ಯಶ್ ಬರ್ತ್ ಡೇ ಆಚರಿಸಿರಲಿಲ್ಲ. ಈ ಬಾರಿ ಸರಳವಾಗಿ ಆಚರಿಸುವ ಸಾಧ‍್ಯತೆಯಿದೆ. ಅದಕ್ಕಿಂತ ಹೆಚ್ಚಾಗಿ ಅಭಿಮಾನಿಗಳಿಗೆ ಕೆಜಿಎಫ್ ಬಗ್ಗೆ ಹೊಸ ಅಪ್ ಡೇಟ್ ಸಿಗಬಹುದು ಎಂಬ ನಿರೀಕ್ಷೆ. ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಯಶ್ ಬರ್ತ್ ಡೇ ದಿನ ಹಾಡು, ಟೀಸರ್ ಅಥವಾ ವಿಡಿಯೋ ಗಿಫ್ಟ್ ಆಗಿ ಸಿಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ