ಕನ್ನಡ ಸಿನಿಮಾಗಳಿಗೆ ಪೈರಸಿ ಕಾಟ ಶುರು

ಗುರುವಾರ, 30 ಸೆಪ್ಟಂಬರ್ 2021 (08:55 IST)
ಬೆಂಗಳೂರು: ಥಿಯೇಟರ್ ಓಪನ್ ಆದ ಖುಷಿಯಲ್ಲಿರುವ ಕನ್ನಡ ಚಿತ್ರರಂಗಕ್ಕೆ ಪೈರಸಿ ತಲೆನೋವೂ ಶುರುವಾಗಿದೆ.


ಇದಕ್ಕೂ ಮೊದಲೂ ಕೂಡಾ ಸ್ಟಾರ್ ಸಿನಿಮಾಗಳು ಬಿಡುಗಡೆಯಾದಾಗ ಪೈರಸಿ ಕಾಟ ಇದ್ದೇ ಇರುತ್ತಿತ್ತು. ಇದಕ್ಕೂ ಮೊದಲು ಪೊಗರು, ರಾಬರ್ಟ್ ಸಿನಿಮಾಗೂ ಪೈರಸಿ ಕಾಟ ಎದುರಾಗಿತ್ತು. ಇದೀಗ ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಕೋಟಿಗೊಬ್ಬ 3 ಸಿನಿಮಾಗೂ ಪೈರಸಿ ಆತಂಕ ಶುರುವಾಗಿದೆ.

ಮೊದಲೇ ನಷ್ಟದಲ್ಲಿರುವ ಚಿತ್ರರಂಗಕ್ಕೆ ಪೈರಸಿಕೋರರು ಹೊಟ್ಟೆ ಮೇಲೆ ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಬಗ್ಗೆ ಚಿತ್ರರಂಗದ ಮಂದಿ ಒಟ್ಟಾಗಿ ಕಾರ್ಯಪ್ರವೃತ್ತರಾಗುವ ಅಗತ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ