2024 year back: 2024 ರಂತೆ ಸಪ್ಪೆಯಾಗಿರಲ್ಲ ಸ್ಯಾಂಡಲ್ ವುಡ್, 2025 ರಲ್ಲಿ ಬರಲಿದೆ ದೊಡ್ಡವರ ಸಿನಿಮಾಗಳು

Krishnaveni K

ಸೋಮವಾರ, 23 ಡಿಸೆಂಬರ್ 2024 (09:26 IST)
ಬೆಂಗಳೂರು: 2024 ನೇ ವರ್ಷ ಇನ್ನೇನು ಮುಗಿಯುತ್ತಾ ಬಂದಿದ್ದು 2025 ಕ್ಕೆ ಕಾಲಿಡಲು ಒಂದೇ ವಾರ ಬಾಕಿಯಿದೆ. 2025 ರಲ್ಲಿ ಸ್ಯಾಂಡಲ್ ವುಡ್ ಸಿನಿಮಾಗಳ ಮೇಲೆ ಭಾರೀ ನಿರೀಕ್ಷೆಯಿದೆ.

2024 ಸ್ಯಾಂಡಲ್ ವುಡ್ ಪಾಲಿಗೆ ಸಪ್ಪೆ ವರ್ಷ. ಈ ವರ್ಷ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಿದ್ದೇ ಕಡಿಮೆ. ದುನಿಯಾ ವಿಜಯ್ ನಾಯಕರಾಗಿದ್ದ ಭೀಮ, ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿದ್ದ ಕೃಷ್ಣಂ ಪ್ರಿಯ ಸಖಿ, ಧ್ರುವ ಸರ್ಜಾ ನಾಯಕರಾಗಿದ್ದ ಮಾರ್ಟಿನ್, ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್, ಉಪೇಂದ್ರ ಯುಐ ಮತ್ತು ಇನ್ನೇನು ವರ್ಷದ ಕೊನೆಯಲ್ಲಿ ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾ ರಿಲೀಸ್ ಆಗಬೇಕಿದೆ. ಈ ವರ್ಷ ಸ್ಟಾರ್ ಸಿನಿಮಾಗಳಿಲ್ಲದೇ ಸ್ಯಾಂಡಲ್ ವುಡ್ ನಲ್ಲಿ ಕೆಲವು ಹಳೆಯ ಸಿನಿಮಾಗಳನ್ನು ರಿ ರಿಲೀಸ್ ಮಾಡುವ ಹಂತಕ್ಕೆ ತಲುಪಿತ್ತು.

ಆದರೆ ಮುಂದಿನ ವರ್ಷದಲ್ಲಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸಿನಿಮಾಗಳು ತೆರೆಗೆ ಬರುವ ನಿರೀಕ್ಷೆಯಿದೆ. ಈಗಷ್ಟೇ ಜೈಲಿನಿಂದ ಹೊರಬಂದಿರುವ ದರ್ಶನ್ ನಾಯಕರಾಗಿರುವ ಡೆವಿಲ್ ಸಿನಿಮಾ ಮುಂದಿನ ವರ್ಷ ತೆರೆ ಕಾಣುವ ನಿರೀಕ್ಷೆಯಿದೆ. ಅದರ ಹೊರತಾಗಿ ಧ್ರುವ ಸರ್ಜಾ ನಾಯಕರಾಗಿರುವ ಕೆಡಿ ಸಿನಿಮಾ ಬಿಡುಗಡೆಯಾಗಬಹುದು.

ಇದಲ್ಲದೆ ಡಿವೈನ್ ಸ್ಟಾರ್ ಕಾಂತಾರ 2 ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗುವುದಾಗಿ ಈಗಾಗಲೇ ಘೋಷಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾವೂ ಮುಂದಿನ ವರ್ಷ ಮುಗಿಯುವುದರೊಳಗೆ ಬಿಡುಗಡೆಯಾಗಬಹುದು. ಕಿಚ್ಚ ಸುದೀಪ್ ಈಗಾಗಲೇ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಮುಂದಿನ ವರ್ಷಕ್ಕೆ ಒಂದು ಸಿನಿಮಾ ಕೊಡುವುದು ಖಚಿತ.

ಇನ್ನು, ಶಿವರಾಜ್ ಕುಮಾರ್ ಒಂದಲ್ಲಾ ಒಂದು ಸಿನಿಮಾಗಳನ್ನು ಕೊಡುತ್ತಲೇ ಇದ್ದಾರೆ. ಈಗಾಗಲೇ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್ ಗಳಿವೆ. ಆ ಪೈಕಿ ಒಂದು ಅಥವಾ ಎರಡು ಸಿನಿಮಾ ರಿಲೀಸ್ ಆಗುವುದು ಖಚಿತ. ಇದರ ನಡುವೆ ಒಂದಿಷ್ಟು ಹೊಸಬರ ಸಿನಿಮಾವೂ ಬಂದರೆ 2025 ನೇ ವರ್ಷ ಸ್ಯಾಂಡಲ್ ವುಡ್ ನಲ್ಲಿ ಹಬ್ಬವಾಗವುದು ಗ್ಯಾರಂಟಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ