ಡಿಕೆ ಸಹೋದರರನ್ನು ಮದುವೆಗೆ ಆಹ್ವಾನಿಸಿದ ನಟ ಧನಂಜಯ್
ಈಚೆಗೆ ಡಾಕ್ಟರ್ ಧನ್ಯತಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧನಂಜಯ್ ಅವರು ಫೆ.16ರಂದು ಮೈಸೂರಿನಲ್ಲಿ ಮದುವೆಯಾಗುತ್ತಿದ್ದಾರೆ.
ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. ಈ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕಲಾವಿದರು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.