ಪುನೀತ್ ರಾಜ್ ಕುಮಾರ್ ಚಿತ್ರರಂಗಕ್ಕೆ ಬಂದು ಇಂದಿಗೆ 46 ವರ್ಷ
1976 ರಲ್ಲಿ ಪ್ರೇಮದ ಕಾಣಿಕೆ ಸಿನಿಮಾ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು. ಆ ಸಿನಿಮಾದಲ್ಲಿ ನಟಿಸುವಾಗ ಅವರಿಗೆ ಇನ್ನೂ ಆರು ತಿಂಗಳು. ಇದಾದ ಬಳಿಕ ಬಾಲನಟನಾಗಿ ಎಲ್ಲರ ಮನಸ್ಸು ಗೆದ್ದು, ಬಳಿಕ ಪವರ್ ಸ್ಟಾರ್ ಆಗಿ ಬೆಳೆದು ನಿಂತಿದ್ದು ಎಲ್ಲರಿಗೂ ಗೊತ್ತೇ ಇದೆ.
ವಿಪರ್ಯಾಸವೆಂದರೆ ಅವರ ಈ ಸಂಭ್ರಮದ ಕ್ಷಣದಲ್ಲಿ ಅವರೇ ನಮ್ಮೊಂದಿಗಿಲ್ಲ. ಅದೂ ಅವರ ನಿಧನದ ದಿನವೇ ಇಂತಹ ವಿಶೇಷ ದಿನ ಎಂಬುದು ಅಭಿಮಾನಿಗಳಿಗೆ ಮತ್ತಷ್ಟು ನೋವು ತಂದಿದೆ.