ಮುಂಬೈ: 64 ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಉತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೋನಮ್ ಕಪೂರ್ ಅಭಿನಯದ ಮಹಿಳಾ ಪ್ರಧಾನ ಚಿತ್ರ ‘ನೀರಜಾ’ ಉತ್ತಮ ಚಲನಚಿತ್ರ ಪ್ರಶಸ್ತಿ ಪಡೆದಕೊಂಡಿದೆ. ಅಕ್ಷಯ್ ಕುಮಾರ್ ‘ರುಸ್ತುಂ’ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ದಂಗಲ್’ ಚಿತ್ರದಲ್ಲಿ ಕುಸ್ತಿ ಪಟು ಗೀತಾ ಪೋಘಟ್ ಪಾತ್ರ ನಿರ್ವಹಿಸಿದ ಝೈರಾ ವಾಸಿಂಗೆ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಅಮಿತಾಭ್ ಬಚ್ಚನ್ ಅಭಿನಯದ ‘ಪಿಂಕ್’ ಚಿತ್ರ ಉತ್ತಮ ಸಾಮಾಜಿಕ ಕಳಕಳಿಯ ಚಿತ್ರವಾಗಿ ಆಯ್ಕೆಯಾಗಿದೆ.
ಕನ್ನಡದ ‘ರಿಸರ್ವೇಷನ್’ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರಗಳಲ್ಲೊಂದಾಗಿ ಆಯ್ಕೆಯಾಗಿದೆ. ಮರಾಠಿ ಭಾಷೆಯ ನಿರ್ದೇಶಕ ರಾಜೇಶ್ ಮುಪ್ಸುಕ ‘ವೆಂಟಿಲೇಟರ್’ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ