ನೂರು ಕೋಟಿ ಕ್ಲಬ್ ಸೇರಿ ದಾಖಲೆ ಮಾಡಿದ ಆಡು ಜೀವತಂ ಸಿನಿಮಾ

Krishnaveni K

ಶನಿವಾರ, 6 ಏಪ್ರಿಲ್ 2024 (12:25 IST)
ಕೊಚ್ಚಿ: ಪೃಥ್ವಿ ರಾಜ್ ಸುಕುಮಾರನ್ ನಾಯಕರಾಗಿರುವ ಮಲಯಾಳಂ ಸಿನಿಮಾ ಆಡು ಜೀವಿತಂ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಮಾಡಿದೆ.

ಪೃಥ್ವಿ ರಾಜ್ ಸಿನಿಮಾ 8 ದಿನಗಳಲ್ಲಿ 100 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಅತೀ ಕಡಿಮೆ ಸಮಯದಲ್ಲಿ 100 ಕೋಟಿ ರೂ. ಗಳಿಕೆ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರ್ಚ್ 28 ಕ್ಕೆ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

ಈ ಸಿನಿಮಾದಲ್ಲಿ ಪೃಥ್ವಿ ರಾಜ್ ಅಭಿನಯ ನೋಡಿ ಅಭಿಮಾನಿಗಳು ಅವರಿಗೆ ಈ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಗ್ಯಾರಂಟಿ ಎನ್ನುತ್ತಿದ್ದಾರೆ. ಇದೀಗ ಬಿಡುಗಡೆಯಾದ ಒಂದೇ ವರ್ಷಕ್ಕೆ ಅಡುಜೀವಿತಂ 100 ಕೋಟಿ ರೂ. ಗಳಿಕೆ ದಾಖಲೆ ಮಾಡಿ ಸುದ್ದಿಯಾಗಿದೆ.

ಈ ಬಗ್ಗೆ ಸ್ವತಃ ನಾಯಕ ಪೃಥ್ವಿರಾಜ್ ಪೋಸ್ಟ್ ಒಂದನ್ನು ಬರೆದುಕೊಂಡಿದ್ದಾರೆ. ಇದಕ್ಕೆ ಮೊದಲು ಮಲಯಾಳಂನ ಮಂಜುಮೆಲ್ ಬಾಯ್ಸ್ ಸಿನಿಮಾ 200 ಕೋಟಿ ರೂ. ಗಳಿಕೆ ಮಾಡಿದ ಮೊದಲ ಸಿನಿಮಾ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಆಡು ಜೀವಿತಂ ಕೂಡಾ 200 ಕೋಟಿ ದಾಟುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ