ಬಹಿಷ್ಕರಿಸಿ ಟ್ರೆಂಟ್‌ ಗೆ ಬೇಸರಗೊಂಡ ಅಮೀರ್ ಖಾನ್..!

ಮಂಗಳವಾರ, 2 ಆಗಸ್ಟ್ 2022 (17:48 IST)
ಬಾಲಿವುಡ್ ಸ್ಟಾರ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ರಿಲೀಸ್ ಬ್ಯುಸಿಯಲ್ಲಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ರಾರಂಭ ಮಾಡಿದಾಗನಿಂದಲೂ Boycott ಲಾಲ್ ಸಿಂಗ್ ಚಡ್ಡಾ, Boycottಆಮೀರ್ ಖಾನ್ ಪದ ಟ್ರೆಂಡ್​​​ನಲ್ಲಿದೆ. ಟ್ವಿಟ್ಟರ್​​​ನಲ್ಲಿ ಇದು ಆಗಾಗ ಟ್ರೆಂಡ್ ಆಗುತ್ತಲೇ ಇರುತ್ತದೆ. ನೆಟ್ಟಿಗರು ಅಮೀರ್ ಖಾನ್ ಅವರನ್ನು ಬಹಿಷ್ಕರಿಸಬೇಕು, ಅವರ ಸಿನಿಮಾ ಬಹಿಷ್ಕರಿಸಬೇಕು ಎನ್ನುವುದರ ಬಗ್ಗೆ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಮೀರ್ ಖಾನ್, 'Boycott ಬಾಲಿವುಡ್, Boycott ಅಮೀರ್ ಖಾನ್, Boycott ಲಾಲ್ ಸಿಂಗ್ ಚಡ್ಡಾ ಎನ್ನುವುದು ತುಂಬಾ ಬೇಸರವಾಗುತ್ತದೆ. ಏಕೆಂದರೆ ಬಹಳಷ್ಟು ಜನರು ನಾನು ಭಾರತವನ್ನು ಇಷ್ಟಪಡದ ವ್ಯಕ್ತಿ ಎಂದು ನಂಬಿದ್ದಾರೆ. ಹಾಗಾಗಿ ಅವರು ತಮ್ಮ ಹೃದಯದಿಂದ ಇದನ್ನು ಹೇಳುತ್ತಿದ್ದಾರೆ. ಅವರು ತಮ್ಮ ಹೃದಯದಲ್ಲಿ ಅದನ್ನೇ ನಂಬಿದ್ದಾರೆ. ಆದರೆ ಇದು ಶುದ್ದ ಸುಳ್ಳು' ಎಂದು ಆಮೀರ್ ಖಾನ್ ಬೇಸರ ಹೊರಹಾಕಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ