ಗಾಳಿಪಟ 2 ಟ್ರೈಲರ್ ಲಾಂಚ್ ವೇಳೆ ಕುಣಿದು ಕುಪ್ಪಳಿಸಿದ ಶಿವಣ್ಣ, ಉಪೇಂದ್ರ ಭರ್ಜರಿ

ಸೋಮವಾರ, 1 ಆಗಸ್ಟ್ 2022 (09:50 IST)
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾದ ಟ್ರೈಲರ್ ನಿನ್ನೆ ಲಾಂಚ್ ಆಗಿದೆ. ಈ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್ ಅತಿಥಿಗಳಾಗಿ ಆಗಮಿಸಿದ್ದರು.

ಈ ವೇಳೆ ಗಾಳಿಪಟ 2 ಟೀಂ ಜೊತೆ ಶಿವಣ್ಣ, ಉಪೇಂದ್ರ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಗಸ್ಟ್ 12 ರಂದು ಬಿಡುಗಡೆಯಾಗಲಿರುವ ಗಾಳಿಪಟ 2 ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳ ಬಗ್ಗೆ ಟ್ರೈಲರ್ ಲಾಂಚ್ ವೇಳೆ ಶಿವಣ್ಣ ಹೊಗಳಿದ್ದು, ಅದರಲ್ಲೂ ವಿಶೇಷವಾಗಿ ಪವನ್ ಕುಮಾರ್ ಶಾರುಖ‍್ ಖಾನ್ ಥರಾ ಕಾಣ‍್ತಿದ್ದಾರೆ ಎಂದು ಹೊಗಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ