ತೆಲುಗಿನಲ್ಲಿ ವಿಕ್ರಾಂತ್ ರೋಣ ಸಕ್ಸಸ್ ಮೀಟ್ ಆಯೋಜಿಸಿ ಥ್ಯಾಂಕ್ಸ್ ಹೇಳಿದ ಕಿಚ್ಚ ಸುದೀಪ್

ಮಂಗಳವಾರ, 2 ಆಗಸ್ಟ್ 2022 (16:43 IST)
ಹೈದರಾಬಾದ್: ವಿಕ್ರಾಂತ್ ರೋಣ ಎಲ್ಲಾ ಭಾಷೆಗಳಲ್ಲಿ ಸೇರಿ 100 ಕೋಟಿ ಗಳಿಕೆ ಮಾಡಿದ ಬೆನ್ನಲ್ಲೇ ಇಂದು ಹೈದರಾಬಾದ್ ನಲ್ಲಿ ತೆಲುಗು ಅಭಿಮಾನಿಗಳಿಗಾಗಿ ಕಿಚ್ಚ ಸುದೀಪ್ ಸಕ್ಸಸ್ ಮೀಟ್ ನಲ್ಲಿ ಭಾಗಿಯಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಸುದೀಪ್ ತೆಲುಗು ಸ್ನೇಹಿತರಿಗೆ, ಅಭಿಮಾನಿಗಳಿಗೆ ಚಿತ್ರದ ಯಶಸ್ಸಿಗೆ ಸಹಕರಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ತೆಲುಗಿನಲ್ಲಿ ಈ ವಾರಂತ್ಯಕ್ಕೆ ವಿಕ್ರಾಂತ್ ರೋಣ 10 ಕೋಟಿ ರೂ. ಕಲೆಕ್ಷನ್ ದಾಟಲಿದೆ. ಹಿಂದಿಯಲ್ಲೂ 10 ಕೋಟಿ ರೂ. ಸನಿಹ ಬರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ