ಎಲ್ಲರ ಮನಗೆದ್ದ ‘ಆನೆಬಲ’ ಚಿತ್ರದ ಟ್ರೈಲರ್..! ಫೆಬ್ರವರಿ 21ಕ್ಕೆ ಚಿತ್ರ ತೆರೆಗೆ

ಶನಿವಾರ, 8 ಫೆಬ್ರವರಿ 2020 (13:23 IST)
ಸಾಗರ್, ರಕ್ಷಿತಾ ಜೋಡಿಯಾಗಿ ನಟಿಸಿರೋ ‘ಆನೆಬಲ’ ಚಿತ್ರ ಗಾಂದೀನಗರದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದೆ. ಇಡೀ ಚಿತ್ರದಲ್ಲಿ ಹೊಸ ಕಲಾವಿದರ ದೊಡ್ಡ ತಂಡವಿದೆ.  ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಎಲ್ಲರ ಗಮನ ಸೆಳೆದಿದ್ದು, ಈಗ ಬಿಡುಗಡೆಯಾಗಿರುವ ಟ್ರೈಲರ್ ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ. 

aanebala
ಚಿತ್ರತಂಡದಲ್ಲಿ ಹೊಸಬರೇ ತುಂಬಿಕೊಂಡಿದ್ದು, ಪರಿಶ್ರಮ ಹಾಕಿ ಸಿನಿಮಾ ಮಾಡಿದ್ದಾರೆ. ಆಕ್ಷನ್, ಡೈಲಾಗ್, ಲವ್ ಸಬ್ಜೆಕ್ಟ್ಗಳ ಅಬ್ಬರ ಇರೋ ಈ ಕಾಲದಲ್ಲಿ ಗ್ರಾಮೀಣ ಸೊಗಡನ್ನೇ ಪ್ರಧಾವಾಗಿಟ್ಟುಕೊಂಡು ಕಾಂಪಿಟೇಶನ್ ನೀಡೋಕೆ ಬಂದಿರೋ ‘ಆನೆಬಲ’ ಚಿತ್ರ ಸಖತ್ ಕುತೂಹಲ ಮೂಡಿಸಿದೆ. ಸೂನಗಹಳ್ಳಿ ರಾಜು ಮೊದಲ ಬಾರಿ ಆಕ್ಷನ್ ಕಟ್ ಹೇಳ್ತಿರೋ ಚಿತ್ರ ಇದಾಗಿದ್ದು ಕಥೆಯ ಆಯ್ಕೆಯಲ್ಲಿಯೇ ಅರ್ಧ ಗೆದ್ದಿದ್ದಾರೆ ಸೂನಗಹಳ್ಳಿ ರಾಜು.
 
ಎ.ವಿ.ವೇಣು ಗೋಪಾಲ್ ಅಡಕಿಮಾರನಹಳ್ಳಿ ‘ಆನೆಬಲ’ ಚಿತ್ರದ ನಿರ್ಮಾಪಕರಾಗಿದ್ದು, ಜನತಾ ಟಾಕೀಸ್ ಬ್ಯಾನರ್ನಡಿ ನಿರ್ಮಾಣ ಆಗಿರೋ ಈ ಚಿತ್ರ ಫೆಬ್ರವರಿ 21ಕ್ಕೆ ಬಿಡುಯಾಗುತ್ತಿದೆ. ಚಿತ್ರದ ಸ್ಯಾಂಪಲ್ಗಳು ನೋಡುಗರ ಮನ್ಸಸಿಗೆ ಹತ್ತಿರವಾಗಿದ್ದು, ಚಿತ್ರಮಂದಿರದಲ್ಲಿ ಸಿನಿಮಾ ಕಮಾಲ್ ಮಾಡುತ್ತ ಅನ್ನೋದನ್ನ ಕಾದುನೋಡಬೇಕು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ