ಅಭಿಷೇಕ್-ಅವಿವಾ ವಿವಾಹ: ಮದುವೆ ಮಂಟಪಕ್ಕೆ ಆಗಮಿಸಿದ ಅಭಿ

ಸೋಮವಾರ, 5 ಜೂನ್ 2023 (08:10 IST)
Photo Courtesy: Twitter
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಪ್ರಕಾಶ್ ಬಿಡಪ್ಪಾ ಪುತ್ರಿ ಅವಿವಾ ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಅರಮನೆ ಮೈದಾನದಲ್ಲಿ ನಡೆಯಲಿರುವ ಅದ್ಧೂರಿ ವಿವಾಹ ಸಮಾರಂಭಕ್ಕೆ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ. ಮದುವೆ ಮಂಟಪವನ್ನು ಸಿನಿಮಾ ಸೆಟ್ ರೀತಿ ಭರ್ಜರಿಯಾಗಿ ನಿರ್ಮಿಸಲಾಗಿದೆ.

ಇನ್ನು, ಮದುವೆ ಮಂಟಪಕ್ಕೆ ವರ ಅಭಿಷೇಕ್ ಮತ್ತು ಕುಟುಂಬಸ್ಥರು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಬೆಳಿಗ್ಗೆ 9.30 ರ ನಂತರ ನಡೆಯುವ ಮುಹೂರ್ತದಲ್ಲಿ ಅಭಿ-ಅವಿವಾ ಸತಿ-ಪತಿಗಳಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ