ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂದು ಹೀಗೆ ಮಾಡ್ಬೇಡಿ: ರಮ್ಯಾ ಸಲಹೆ
ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಜೊತೆಗೆ ತಮ್ಮದೇ ಹಾಡಿನ ತುಣುಕನ್ನು ತೋರಿಸಿ ಉಚಿತ ಎಂದು ನನ್ನ ಹಾಗೆ ಸರ್ಕಸ್ ಮಾಡಬೇಡಿ ಎಂದಿದ್ದಾರೆ.
ಇದು ನಿಜಕ್ಕೂ ಗ್ರೇಟ್ ಸುದ್ದಿ. ಆದರೆ ಫ್ರೀ ಎಂದು ಖುಷಿಗೆ ನನ್ನ ಹಾಗೆ ಮಾಡಲು ಹೋಗಬೇಡಿ ಎಂದಿದ್ದಾರೆ. ಆಕಾಶ ಭೂಮಿಯೆಲ್ಲ ಒಂದಾದ ಹಾಗಿದೆ ಎಂದು ತಮ್ಮ ಸಿನಿಮಾದ ಹಾಡೊಂದರಲ್ಲಿ ಬಸ್ ನಲ್ಲಿ ನೇತಾಡಿಕೊಂಡು ಖುಷಿಪಡುವ ದೃಶ್ಯವನ್ನು ಪ್ರಕಟಿಸಿ ರಮ್ಯಾ ಹೀಗೆ ತಮಾಷೆ ಮಾಡಿಕೊಂಡಿದ್ದಾರೆ.