ಅಭಿಷೇಕ್-ಅವಿವಾ ಮೆಹಂದಿ ಶಾಸ್ತ್ರದಲ್ಲಿ ಮಿಂಚಿದ ತಾರೆಯರು

ಶನಿವಾರ, 3 ಜೂನ್ 2023 (09:44 IST)
Photo Courtesy: Instagram
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಫ್ಯಾಶನ್ ಡಿಸೈನರ್ ಪ್ರಕಾಶ್ ಬಿಡಪ್ಪಾ ಪುತ್ರಿ ಅವಿವಾ ಬಿಡಪ್ಪಾ ವಿವಾಹ ಪೂರ್ವ ಕಾರ್ಯಕ್ರಮಗಳು ನಿನ್ನೆಯಿಂದ ಆರಂಭವಾಗಿದೆ.

ಅಂಬಿ ಮನೆಯಲ್ಲಿ ನಿನ್ನೆ ಅರಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ ನೆರವೇರಿದೆ. ಅವಿವಾ ಮನೆಯಲ್ಲೂ ಮೆಹಂದಿ ಶಾಸ್ತ್ರ ನೆರವೇರಿದೆ. ಇಬ್ಬರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಭಿಷೇಕ್ ಅಂಬರೀಶ್ ಅರಶಿನ, ಮೆಹಂದಿ ಶಾಸ್ತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರು ಭಾಗಿಯಾಗಿದ್ದಾರೆ. ಜೂನ್ 5 ರಂದು ವಿವಾಹ ಕಾರ್ಯಕ್ರಮ ನೆರವೇರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ