ರೆಬೆಲ್ ಲುಕ್ ನಲ್ಲಿ ಜೂ.ರೆಬಲ್ ಸ್ಟಾರ್ ಅಭಿಷೇಕ್: ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ

ಶನಿವಾರ, 27 ಆಗಸ್ಟ್ 2022 (18:23 IST)
ಬೆಂಗಳೂರು: ಇಂದು ಸುಮಲತಾ ಅಂಬರೀಶ್ ಹುಟ್ಟುಹಬ್ಬದ ನಿಮಿತ್ತ ಜೂ.ರೆಬಲ್ ಸ್ಟಾರ್  ಅಂಬರೀಶ್ ನಾಯಕರಾಗಿರುವ ನಾಲ್ಕನೇ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ.

ಅಯೋಗ್ಯ ಖ್ಯಾತಿಯ ನಿರ್ದೇಸಕ ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ ಅಭಿಷೇಕ್ ವೃತ್ತಿ ಜೀವನದ ನಾಲ್ಕನೇ ಸಿನಿಮಾದ ಪೋಸ್ಟರ್ ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸಮಾಧಿ ಮುಂದೆ ಅನಾವರಣಗೊಂಡಿದೆ.

ಈ ಪೋಸ್ಟರ್ ನಲ್ಲಿ ಅಭಿಷೇಕ್ ಸಖತ್ ರೆಬಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ