ಹುಟ್ಟುಹಬ್ಬದ ದಿನ ಅಂಬರೀಶ್ ಸಮಾಧಿಗೆ ಭೇಟಿ ಕೊಟ್ಟ ಸುಮಲತಾ ಅಂಬರೀಶ್

ಶನಿವಾರ, 27 ಆಗಸ್ಟ್ 2022 (18:10 IST)
ಬೆಂಗಳೂರು: ಇಂದು ಸುಮಲತಾ ಅಂಬರೀಶ್ ಜನ್ಮದಿನವಾಗಿದ್ದು, ಪುತ್ರ ಅಭಿಷೇಕ್ ನೊಂದಿಗೆ ಸುಮಲತಾ ಕಂಠೀರವ ಸ್ಟುರಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಭೇಟಿ ಕೊಟ್ಟಿದ್ದಾರೆ.

ಜನ್ಮದಿನದಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡಾ ಜೊತೆಗಿದ್ದರು.

ಇಂದು ಸುಮಲತಾ ಹುಟ್ಟುಹಬ್ಬ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ಕಲಾವಿದರು, ಸ್ನೇಹಿತರು ಸುಮಲತಾಗೆ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ