ಇಂದು ಸಾಲು ಸಾಲು ಸಿನಿಮಾಗಳು ಬಿಡುಗಡೆ

ಶುಕ್ರವಾರ, 26 ಆಗಸ್ಟ್ 2022 (08:30 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಸಾಲು ಸಾಲು ಸಿನಿಮಾಗಳು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿವೆ. ಬಹುತೇಕ ಹೊಸಬರ ಸಿನಿಮಾಗಳೇ ಎನ್ನುವುದು ವಿಶೇಷ.

ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಡೊಳ್ಳು ಸಿನಿಮಾ ಇಂದು ತೆರೆ ಕಾಣುತ್ತಿದೆ. ಈ ಸಿನಿಮಾವನ್ನು ಸಾಗರ್ ಪುರಾಣಿಕ್ ನಿರ್ದೇಶಿಸಿದ್ದು, ಕಾರ್ತಿಕ್, ಮಹೇಶ್, ನಿಧಿ ಹೆಗ್ಡೆ ಮುಂತಾದವರು ಅಭಿನಯಿಸಿದ್ದಾರೆ.

ಡಾ. ರಾಜ್ ಕುಟುಂಬದ ಮತ್ತೊಬ್ಬ ಕುಡಿ ಧೀರೇನ್ ರಾಮ್ ಕುಮಾರ್ ಚೊಚ್ಚಲ ಸಿನಿಮಾ ಶಿವ 143 ಇಂದು ತೆರೆ ಕಾಣುತ್ತಿದೆ. ಈ ಸಿನಿಮಾ ಈಗಾಗಲೇ ಟ್ರೈಲರ್ ನಿಂದ ಗಮನ ಸೆಳೆದಿದೆ.

ಇದಲ್ಲದೆ ಪ್ರಭಾಕರ್ ಶೇರ್ ಖಾನೆ ಅವರ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಕೌಟಿಲ್ಯ, ಹೊಸ ಪ್ರತಿಭೆಗಳೇ ನಿರ್ಮಿಸಿರುವ ವಿಕಿಪೀಡಿಯಾ, ಮರ್ಕಟ ಸಿನಿಮಾಗಳೂ ಇಂದು ತೆರೆ ಕಾಣುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ