ಹೈದರಾಬಾದ್ : ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ ಅವರು ಇದೀಗ ಮಾರಣಾಂತಿಕ ಕೊರೊನಾ ವೈರಸ್ ರೋಗಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ಅವರು ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದು, ಆ ವೇಳೆ ಪೊಸಿಟಿವ್ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಅವರು ಟ್ವೀಟರ್ ನಲ್ಲಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಹಾಗೇ ವಿಡಿಯೋ ಅಪ್ ಲೋಡ್ ಮಾಡಿ ತಮಗೆ ಯಾವುದೇ ರೋಗ ಲಕ್ಷಣವಿರಲಿಲ್ಲ. ಹಾಗಾಗಿ ಅವರೊಂದೊಗೆ ಸಂಪರ್ಕಕ್ಕೆ ಬಂದವರು ಪರೀಕ್ಷೆಗೆ ಒಳಗಾಗುವಂತೆ ಸಲಹೆ ನೀಡಿದ್ದಾರೆ.