ಸುಂದೀಪ್ ಕಿಶನ್ ಅಭಿನಯದ ಚಿತ್ರದ ‘ರೌಡಿ ಬೇಬಿ’ ಶೀರ್ಷಿಕೆ ರದ್ದು

ಸೋಮವಾರ, 15 ಮಾರ್ಚ್ 2021 (07:14 IST)
ಹೈದರಾಬಾದ್ : ಸುಂದೀಪ್ ಕಿಶನ್ ಅಭಿನಯದ ಮುಂಬರುವ ಯೋಜನೆಯನ್ನು ನಿರ್ಮಿಸುತ್ತಿರುವ ಕೋನಾ ಫಿಲ್ಮ್ ಕಾರ್ಪೋರೇಶನ್  ಈ ಚಿತ್ರಕ್ಕೆ ‘ರೌಡಿ ಬೇಬಿ’ ಎಂದು ಹೆಸರಿಡಲಾಗಿದೆ. ಆದರೆ ಇದನ್ನು ಈಗ ಬದಲಾಯಿಸಲಾಗಿದೆಯಂತೆ.

ಸಾಯಿ ಪಲ್ಲವಿ ಮತ್ತು ಧನುಷ್ ‘ರೌಡಿ ಬೇಬಿ’ ಹಾಡು ಸಂಗೀತ ಪ್ರಿಯರ ಮನಗೆದ್ದಿದೆ. ಹಾಗಾಗಿ ಡಿಸೆಂಬರ್ ತಿಂಗಳ ಕೊನೆಯಲ್ಲಿ ಸುಂದೀಪ್ ಕಿಶನ್ ಚಿತ್ರಕ್ಕೆ ನಿರ್ಮಾಪಕರು  ರೌಡಿ ಬೇಬಿ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.

ಆದರೆ ಇತ್ತೀಚಿನ ಮಾಹಿತಿ ಪ್ರಕಾರ ನಿರ್ಮಾಪಕರು ಚಿತ್ರದ ಶೀರ್ಷಿಕೆಯನ್ನು ರದ್ದುಪಡಿಸಿದ್ದಾರೆ  ಮತ್ತು ಅದನ್ನು ಟ್ವೀಟರ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ದೃಢಪಡಿಸಿದ್ದಾರೆ ಎನ್ನಲಾಗಿದೆ. ಹಾಗೇ ಈ ಚಿತ್ರಕ್ಕೆ ‘ಗಲ್ಲಿ ರೌಡಿ ‘ ಎಂಬ ಶೀರ್ಷಿಕೆ ಇಡಲಾಗುವುದು ಎಂಬ ವದಂತಿ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ