ಮಗನನ್ನ ಎದೆ ಮೇಲೆ ಮಲಗಿಸಿ ಮುದ್ದಾಡಿದ ನಟ ಚಂದನ್ ಕುಮಾರ್‌ಗೆ ಬುದ್ಧಿವಾದ ಹೇಳಿದ ತಾಯಂದಿರು
ಹಂಚಿಕೊಂಡ ವಿಡಿಯೋದಲ್ಲಿ ಚಂದನ್ ತನ್ನ ಪುಟ್ಟ ಕಂದಮ್ಮನನ್ನು ಎದೆ ಮೇಲೆ ಮಲಗಿಸಿ ಮುದ್ದಾಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ಅಯ್ಯೋ ಇನ್ನೂ ತಿಂಗಳು ಭರ್ತಿ ಆಗದ ಮಗು.. ಆ ಥರ ಮಲಗಿಸಿದ್ದೀರಾ ಎಂದಿದ್ದಾರೆ. ಮತ್ತೊಬ್ಬರು ಮಗುವಿಗೆ ಈಗಷ್ಟೇ ವಾರ ತುಂಬುತ್ತಿದೆ. ಹಾಗೆಲ್ಲ ಮಾಡಬಾರದು ತುಂಬಾ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು ಎಂದು ಬುದ್ಧಿಮಾತು ಹೇಳಿದ್ದಾರೆ.