ಆದರೆ ಅವರ ಹನಿಮೂನ್ ಸೀಕ್ರೆಟ್ ಈಗ ಬಯಲಾಗಿದೆ. ಇಂದು ಸೋನಲ್ ಮತ್ತೊಂದು ಫೋಟೋ ಪ್ರಕಟಿಸಿದ್ದು, ಇಬ್ಬರೂ ಹೋಗಿದ್ದು ಹನಿಮೂನ್ ಗೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ದುಬೈಗೆ ಹೋಗಿರುವ ಫೋಟೋ ಹಂಚಿಕೊಂಡಿರುವ ಸೋನಲ್ ಅದರ ಹಿಂದಿನ ಕಾರಣವನ್ನೂ ರಿವೀಲ್ ಮಾಡಿದ್ದಾರೆ.
ಅಷ್ಟಕ್ಕೂ ಸೋನಲ್ ಮತ್ತು ತರುಣ್ ಜೊತೆಯಾಗಿ ಹೋಗಿದ್ದು ದುಬೈಗೆ. ಅದೂ ಸ್ಯಾಂಡಲ್ ವುಡ್ ನಟಿ ಮಾಲಾಶ್ರೀ, ಆರಾಧನಾ ಸೇರಿದಂತೆ ಕುಟುಂಬದವರೂ ಜೊತೆಯಾಗಿದ್ದಾರೆ. ಇವರೆಲ್ಲಾ ದುಬೈನಲ್ಲಿ ನಡೆಯಲಿರುವ ಐಐಎಫ್ಎ ಉತ್ಸವ 2024 ರಲ್ಲಿ ಭಾಗಿಯಾಗಲು ತೆರಳಿದ್ದಾರೆ.