ಮೊದಲ ಬಾರಿ ಪತ್ನಿ ವಿಜಯಲಕ್ಷ್ಮಿಯನ್ನು ಮುದ್ದಾಗಿ ಕರೆಯುವ ಹೆಸರನ್ನು ಹೇಳಿದ ದರ್ಶನ್

Sampriya

ಗುರುವಾರ, 27 ಮಾರ್ಚ್ 2025 (19:31 IST)
Photo Courtesy X
ಏಪ್ರಿಲ್‌ 10ಕ್ಕೆ ನಟ ಧನ್ವೀರ್ ಗೌಡ ಅಭಿನಯದ ಬಹುನಿರೀಕ್ಷಿತ ವಾಮನ ಸಿನಿಮಾ ಬಿಡುಗಡೆಯಾಗಲಿದೆ. ಇದೀಗ ಸಿನಿಮಾದ ಟ್ರೈಲರ್‌ ಅನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ನಾಯಕನಿಗೆ ಶುಭ ಹಾರೈಸಿದ್ದಾರೆ.

ಅದಲ್ಲದೆ ಈ ಸಿನಿಮಾದ ಮುದ್ದು ರಾಕ್ಷಸಿ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ ದರ್ಶನ್ ಅವರು, ತಮ್ಮ ಮಡದಿ ವಿಜಯಲಕ್ಷ್ಮಿಯನ್ನು ಮುದ್ದಾಗಿ ಏನೆಂದು ಕರೆಯುವುದನ್ನು ಹೇಳಿಕೊಂಡಿದ್ದಾರೆ.  ಈ ಸಿನಿಮಾದ ಮುದ್ದು ರಾಕ್ಷಸಿ ಹಾಡು ತುಂಬಾ ಚೆನ್ನಾಗಿದೆ. ನನ್ನ ಹೆಂಡತಿಯನ್ನು ಮುದ್ದಾಗಿ ಮುದ್ದು ರಾಕ್ಷಸಿ ಅಂತಾನೇ ಕರೆಯುವುದು ಎಂದಿದ್ದಾರೆ.

ಈ ಹಿಂದೆಯೂ ಹೇಳಿದಂತೆ ವಾಮನ ಸಿನಿಮಾದ ಟ್ರೈಲರ್‌ ಅನ್ನು ದರ್ಶನ್ ಅವರೇ ಲಾಂಚ್ ಮಾಡಿದ್ದಾರೆ. ಆದರೆ ಟ್ರೈಲರ್ ಲಾಂಚ್ ಈವೆಂಟ್ ಭಾಗಿಯಾಗದೆ ಅವರು, ವಿಡಿಯೋ ಮುಖಾಂತರ ಲಾಂಚ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ದರ್ಶನ್ ಜತೆ ನಟ ಧನ್ವೀರ್ ಕೂಡಾ ಇದ್ದರು. ಈ ವೇಳೆ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಹಿಂದೆ ವಿಜಯಲಕ್ಷ್ಮಿ ದರ್ಶನ್ 'ವಾಮನ' ಚಿತ್ರದ ಸಾಂಗ್ ರಿಲೀಸ್ ಮಾಡಿ ಶುಭ ಕೋರಿದ್ದರು. ಅದೇ ರೀತಿ ಇದೀಗ ದರ್ಶನ್ ಟ್ರೈಲರ್ ಲಾಂಚ್ ಮಾಡಿದ್ದಾರೆ. ಧನ್ವೀರ್ ಗೌಡ ಹೊಸ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಧನ್ವೀರ್ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳನ್ನು ಮಾಡುತ್ತಾ ಬರ್ತಿದ್ದಾರೆ. 'ವಾಮನ' ಚಿತ್ರದಲ್ಲಿ ಕೂಡ ಅದು ಗೊತ್ತಾಗುತ್ತಿದೆ ಎಂದಿದ್ದಾರೆ.

'ವಾಮನ' ಚಿತ್ರದಲ್ಲಿ ಮದರ್ ಸೆಂಟಿಮೆಂಟ್, ಆಕ್ಷನ್ ಇದೆ. ಟ್ರೈಲರ್ ಬಹಳ ಸೊಗಸಾಗಿದೆ. ನನಗೆ ಚಿತ್ರದ ಹಾಡುಗಳು ಇಷ್ಟು. ಅದರಲ್ಲೂ ಮುದ್ದು ರಾಕ್ಷಸಿ ಬಳಹ ಇಷ್ಟ. ನಾನು ಕೆಲವೊಮ್ಮೆ ನನ್ನ ಹೆಂಡತಿಯನ್ನು ಮದ್ದು ರಾಕ್ಷಸಿ ಎಂದು ರೇಜಿಸುತ್ತಿರ್ತೀನಿ ಎಂದಿದ್ದಾರೆ. ಕನ್ನಡ ಪ್ರೇಕ್ಷಕರಲ್ಲಿ ಒಂದು ಮನವಿ ಕನ್ನಡ ಸಿನಿಮಾಗಳನ್ನು ನೋಡಿ ಎಂದು ದರ್ಶನ್ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ