ಬೆಂಗಳೂರು: ಕಳೆದ ಕೆಲ ದಿನಗಳಿಂದ ಡೆವಿಲ್ ಸಿನಿಮಾದ ಶೂಟಿಂಗ್ ಶುರು ಮಾಡಿದ ನಟ ದರ್ಶನ್‌ಗೆ ಇದೀಗ ಕೊಲೆ ಪ್ರಕರಣ ಸಂಬಂಧ ಮತ್ತೊಂದು ಸಂಕಷ್ಟ ಎದುರಾಗಿದೆ.
ನಟ ದರ್ಶನ್ ಅವರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ದರ್ಶನ್ ಅವರ ಜಾಮೀನು ರದ್ದು ಕೋರಿ ವಕೀಲ ಅನಿಲ್ ಕುಮಾರ್ ನಿಶಾಸನಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸದ್ದಾರೆ. ಇದರ ವಿಚಾರಣೆ ಏಪ್ರಿಲ್ 2ರಂದು ನಡೆಯಲಿದೆ. ಈ ಮೂಲಕ ಇದೀಗ ಮತ್ತೊಂದು ದೊಡ್ಡ ಸಂಕಷ್ಟ ದರ್ಶನ್‌ಗೆ ಎದುರಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜೈಲಿಂದ್ದ ಬಿಡುಗಡೆಯಾದ ಬಳಿಕ ಬೆನ್ನುನೋವಿಗೆ ಚಿಕಿತ್ಸೆ ಪಡೆದು ಫ್ಯಾಮಿಲಿ ಜತೆ ಮೈಸೂರಿನಲ್ಲಿ ರಿಲ್ಯಾಕ್ಸ್ ಆಗಿದ್ದರು. ತಮ್ಮ ಫಾರ್ಮ್ ಹೌಸ್‌ನಲ್ಲೇ ಹುಟ್ಟುಹಬ್ಬವನ್ನು ಆಪ್ತರೊಂದಿಗೆ ಆಚರಿಸಿಕೊಂಡಿದ್ದರು. ಇದೀಗ ಕೆಲ ದಿನಗಳಿಂದ ಡೆವಿಲ್ ಶೂಟಿಂಗ್‌ನಲ್ಲಿ ದರ್ಶನ್ ತೊಡಗಿಸಿಕೊಂಡಿದ್ದಾರೆ.