ಜೈಲಿಗೆ ಹೋಗಿ ಬಂದ್ಮೇಲೆ ಬದಲಾದ ದರ್ಶನ್ ಬಣ್ಣ, ಪ್ಯಾನ್ಸ್‌ ಫುಲ್ ಖುಷ್‌

Sampriya

ಸೋಮವಾರ, 10 ಫೆಬ್ರವರಿ 2025 (20:19 IST)
Photo Courtesy X
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೂಲಕ ಹೊರಬಂದಿರುವ ನಟ ದರ್ಶನ್ ಅವರ ನ್ಯೂ ಲುಕ್ ನೋಡಿ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ರಿಲ್ಯಾಕ್ಷ್ ಆಗುತ್ತಿರುವ ದರ್ಶನ್ ಅವರು ಸದ್ಯ ಫ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದಾರೆ.

ಇದೇ 16ರಂದು 48ನೇ ವರ್ಷಕ್ಕೆ ಕಾಲಿಡುತ್ತಿರುವ ದರ್ಶನ್ ಅವರು ಈ ಭಾರಿ ತನ್ನ ಸೆಲೆಬ್ರಿಟಿಗಳ ಜತೆ ಬರ್ತಡೇ ಆಚರಿಸಲ್ಲ ಎಂದು ಹೇಳಿ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ದರ್ಶನ್ ಜೈಲಿಗೆ ಹೋಗಿ ಬಂದ್ಮೇಲೆ ಆಗಿರುವ ಮೊದಲ ವಿಡಿಯೋವಾಗಿದೆ.

ರೇಣುಕಾಸ್ವಾಮಿ ಪ್ರಕರಣ ಬಳಿಕ ದರ್ಶನ್ ಮೊದಲ ಬಾರಿ ಮನಬಿಚ್ಚಿ ವಿಡಿಯೋವೊಂದರಲ್ಲಿ ಮಾತನಾಡಿದ್ದರು. ಈ ವಿಡಿಯೋದಲ್ಲಿ ಹಲವು ವಿಚಾರಗಳ ಬಗ್ಗೆ ದರ್ಶನ್ ಮಾತನಾಡಿದ್ದರು. ಹಲವು ದಿನಗಳ ಬಳಿಕ ದರ್ಶನ್ ಅವರ ಮಾತುಕೇಳಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅದರಲ್ಲೂ ದರ್ಶನ್ ಅವರ ಮುಖದ ಬಣ್ಣ ಹಾಗೂ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ವಿಡಿಯೋದಲ್ಲಿ ದರ್ಶನ್ ಯಂಗ್ ಆಗಿ ಕಾಣುತ್ತಿದ್ದಾರೆ.  ನಮ್ಮ ಹಳೆ ಬಾಸ್ ವಾಪಾಸ್ ಬಂದ್ರು ಎಂದು ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ