ಮದುವೆಗೆ ಆಹ್ವಾನಿಸಲು ದರ್ಶನ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ನಟ ಡಾಲಿ ಧನಂಜಯ್

Sampriya

ಮಂಗಳವಾರ, 11 ಫೆಬ್ರವರಿ 2025 (19:09 IST)
Photo Courtesy X
ಮೈಸೂರು: ಈಗಿನ ಪರಿಸ್ಥಿತಿಯಲ್ಲಿ ದರ್ಶನ್ ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಅವರ ಭೇಟಿಗೆ ಪ್ರಯತ್ನ ಪಟ್ಟಿದ್ದು, ನನ್ನ ಮದುವೆಗೆ ದರ್ಶನ್  ಅವರು ಬಂದರೆ ನನಗೆ ತುಂಬಾ ಸಂತೋಷ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ.

ಇದೇ 15ಹಾಗೂ 16ರಂದು ಡಾಲಿ ಧನಂಜಯ್ ಅವರು ಡಾ.ಧನ್ಯತಾ ಅವರನ್ನು ಕೈಹಿಡಿಯಲಿದ್ದಾರೆ.  ತನ್ನ ಮದುವೆಗೆ ಸಿನಿಮಾ ಹಾಗೂ ರಾಜಕೀಯ ಗಣ್ಯರನ್ನು ಧನಂಜಯ್ ಆಹ್ವಾನ ಮಾಡಿದ್ದಾರೆ.  

ಮದುವೆಗೆ ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ. ದರ್ಶನ್ ಅವರನ್ನ ಕರೆಯುವ ಪ್ರಯತ್ನ ಮಾಡುತ್ತಿದ್ದೇನೆ. ದರ್ಶನ್‍ರವರು ಸಿಗುತ್ತಿಲ್ಲ. ದರ್ಶನ್ ಅವರು ನನ್ನ ಮದುವೆಗೆ ಬಂದರೆ ನನಗೆ ಸಂತೋಷ ಎಂದರು.

ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ನಡೆಯಲಿರುವ ಮದುವೆ ಕುರಿತು ಪ್ರತಿಕ್ರಿಯಿಸಿ, ಮದುವೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರಿನಲ್ಲೇ ಮದುವೆ ಆಗಬೇಕು ಎನ್ನುವುದು ನಮ್ಮ ಕನಸು. ನನ್ನ ವಿದ್ಯಾಭ್ಯಾಸ, ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಎಲ್ಲವೂ ಮೈಸೂರಿನಿಂದಲೇ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿಗಲಿ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ