ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ತಡೆಗಟ್ಟಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಟಾಸ್ಕ್ಫೋರ್ಸ್ ಸಮಿತಿ ರಚಿಸಿದ್ದಕ್ಕೆ ನಟ ದುನಿಯಾ ವಿಜಯ್ ಸಂತಸ ವ್ಯಕ್ತಪಡಿಸಿದ್ದಾರೆ.
ದುನಿಯಾ ವಿಜಯ್ ಅಭಿನಯದ ಭೀಮ ಸಿನಿಮಾದಲ್ಲಿ ಡ್ರಗ್ಸ್ ಜಾಲದ ಬಗ್ಗೆ ಅರಿವು ಮೂಡಿಸಲಾಗಿತ್ತು. ಅದಲ್ಲದೆ ವಿಜಯ್ ಅವರು ಈಚೆಗೆ ಮೆಡಿಕಲ್ ಶಾಪ್‌ಗಳಲ್ಲಿ ಅಕ್ರಮವಾಗಿ ನೀಡುವ ಮತ್ತೇರಿಸುವ ಮಾತ್ರೆಗಳ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಿದ್ದರು. ಬೆಂಗಳೂರಿನ ಹೊರವಲಯದಲ್ಲೂ ಈ ಮಾತ್ರೆಗಳ ಜಾಲ ಹಬ್ಬಿದ್ದು, ಪೊಲೀಸರ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದರು.
ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಡ್ರಗ್ಸ್ ತಡೆಗಟ್ಟಲು ದಿಟ್ಟ ಹೆಜ್ಜೆಯಿಟ್ಟಿದೆ. ಅದರ ಅನುಸಾರ ಸಿಎಂ ಸಿದ್ದರಾಮಯ್ಯ ಅವರು ಟಾಸ್ಕ್‌ಪೋರ್ಸ್ ಸಮಿತಿ ರಚಿಸಿದ್ದು ಅದರ ಅಧ್ಯಕ್ಷರನ್ನಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ನೇಮಿಸಲಾಗಿದೆ.
ಈ ಸಂಬಂಧ ದುನಿಯಾ ವಿಜಯ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಹಾಗೂ ಯುವಕರ ಬದುಕನ್ನ ಉಳಿಸಲು ಮತ್ತು ಡ್ರಗ್ಸ್, ಗಾಂಜ ಮತ್ತಿತರೆ ವ್ಯಸನಕ್ಕೆ ಒಳಾಗಾಗುವದನ್ನ ತಡೆಗಟ್ಟಲು ಮಹತ್ತರ ಕಾರ್ಯಕ್ಕೆ ನಿಂತಿರುವ ಸರ್ಕಾರಕ್ಕೆ. ಪೊಲೀಸ್ ಇಲಾಖೆಗೆ ಹಾಗು ಮಾಧ್ಯಮ ಮಿತ್ರರಿಗೇ ಧನ್ಯವಾದಗಳು. @siddaramaiah
@DrParameshwara ಎಂದು ವಿಜಯ್ ಬರೆದುಕೊಂಡಿದ್ದಾರೆ.