ಬೆಂಗಳೂರು: ಇಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವೇಗದೂತ ಮಾದರಿ ಬಸ್‌ಗಳ ಲೋಕಾರ್ಪಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಇತರೇ ಸಚಿವರು ನೆರವೇರಿಸಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಈ ಭಾಗದ ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಡಿಯಲ್ಲಿ ಖರೀದಿಸಲಾದ ಒಟ್ಟು 109 ವೇಗದೂತ ಮಾದರಿಯ ಬಸ್ಸುಗಳ ಪೈಕಿ ಇಂದು 50 ಬಸ್‌ಗಳನ್ನು ಉದ್ಘಾಟನೆ ಮಾಡಲಾಗಿದೆ.
ಈ ಬಸ್‌ಗಳಲ್ಲಿ 200 HP ಸಾಮರ್ಥ್ಯದ BS-6 ಎಂಜಿನ್‌ಗಳನ್ನು ಅಳವಡಿಸಿದ್ದು, 50 ಪ್ರಯಾಣಿಕ ಆಸನಗಳನ್ನು ಹೊಂದಿವೆ.
ಈ ಬಸ್‌ಗಳನ್ನು ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ ಬಸ್ ಕೋಡ್‌ನಂತೆ ನಿರ್ಮಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ, ಈ ಬಸ್ಸುಗಳಲ್ಲಿ, Fire Detection and Alarm System, Electronic Vehicle Stability Control System, ಸ್ವಯಂ ಚಾಲಿತ ಬಾಗಿಲು , ನಾಲ್ಕು ಸಿ.ಸಿ. ಕ್ಯಾಮೆರಾಗಳು, ರೀವರ್ಸ್ ಪಾರ್ಕಿಂಗ್ ಅಲರಾಮ್ ಸಿಸ್ಟಂ, ವೆಹಿಕಲ್ ಲೋಕೆಶನ್ ಟ್ರ್ಯಾಕಿಂಗ್ ಸಿಸ್ಟಂ ಹಾಗೂ ಪ್ಯಾಸೆಂಜರ್ ಇನಫಾರಮೆಶನ್ ಸಿಸ್ಟಂ & ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದೆ.
ಶ್ರೀ ಎಚ್.ಕೆ ಪಾಟೀಲ್, ಶ್ರೀ ಪರಮೇಶ್ವರ್, ಶ್ರೀ ಕೆ.ಜೆ ಜಾರ್ಜ್, ಶ್ರೀ ಕೆ.ಎಚ್ ಮುನಿಯಪ್ಪ, ಶ್ರೀ ಅಜಯ್ ಧರ್ಮಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು.