ಆರೋಗ್ಯಕ್ಕೆ ಉಪಯೋಗಕಾರಿ ಈ ಸೊಪ್ಪು

ಗುರುವಾರ, 26 ಏಪ್ರಿಲ್ 2018 (06:17 IST)
ಬೆಂಗಳೂರು : ಬಸಳೆಸೊಪ್ಪಿನ ಗಿಡವನ್ನು ಹೆಚ್ಚಿನವರು ಮನೆಯಲ್ಲೇ ಬೆಳೆಸುತ್ತಾರೆ. ಈ ಸೊಪ್ಪಿನಲ್ಲಿ ಅತಿ ಹೆಚ್ಚಿನ ಪೋಷಕಾಂಶಗಳು ಇರುತ್ತವೆ. ‘ಎ’, ‘ಬಿ’ ಜೀವಸತ್ವಗಳು ಕಬ್ಬಿಣ, ಪೊಟಾಸಿಯಂ ಅತ್ಯದಿಕ ಪ್ರಮಾಣದಲ್ಲಿದೆ. ಆರೋಗ್ಯದ ದೃಷ್ಟಿಯಿಂದ ಈ ಸೊಪ್ಪನ್ನು ಅಡಿಗೆಯಲ್ಲಿ ವಾರಕ್ಕೆ ನಾಲ್ಕೈದು ದಿನಗಳಾದರೂ ಬಳಸುವುದು ಉತ್ತಮ.


ಇದರ ಸೇವನೆಯಿಂದ ಆರೋಗ್ಯ ಸುಧಾರಣೆಯಾಗಿ ಶಾರೀರಿಕ ತೂಕ ಹೆಚ್ಚುವುದು. ಬೇಗ ಜೀರ್ಣ ಆಗುವುದಲ್ಲದೇ ಹಸಿವು ಹೆಚ್ಚಾಗುತ್ತದೆ. ತುಂಬಾ ಹಸಿವಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಬಸಳೆಸೊಪ್ಪಿನಲ್ಲಿ ಕಬ್ಬಿಣ ಹಾಗೂ ರಂಜಕದ ಅಂಶವು ಹೆಚ್ಚಾಗಿರುವುದರಿಂದ ಇದರ ಸೇವನೆಯು ಮಲವಿಸರ್ಜನೆಗೆ ಉತ್ತಮ.


ಹೀಗೆ ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ಒದಗಿಸುವಲ್ಲಿ ಬಸಳೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹಕ್ಕೆ ತಂಪು ನೀಡುವ ಸೊಪ್ಪಾಗಿದ್ದು, ರಕ್ತ ಕೆಡುವುದರಿಂದ ಉಂಟಾಗುವ ಕುರದಂತಹ ಆರೋಗ್ಯ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗು ಮಕ್ಕಳು ಹಾಗೂ ಗರ್ಭಿಣಿಯರಿಗೆ ಅರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ