ಕೆಂಪೇಗೌಡ 2 ಚಿತ್ರದ ಶೂಟಿಂಗ್‌ನಲ್ಲಿ ನಟ ಕೋಮಲ್, ಲೂಸ್ ಮಾದಗೆ ಗಾಯ

ಬುಧವಾರ, 30 ಆಗಸ್ಟ್ 2017 (14:09 IST)
ಕೆಂಪೇಗೌಡ 2 ಚಿತ್ರದ ಶೂಟಿಂಗ್‌ನಲ್ಲಿ ನಟ ಕೋಮಲ್, ಲೂಸ್ ಮಾದಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಮಹಾಬಲೀಪುರಂ ಪ್ರದೇಶದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚೇಸಿಂಗ್ ದೃಶ್ಯದ ಸಂದರ್ಭದಲ್ಲಿ ಅವಗಢ ಸಂಭವಿಸಿದೆ ಎನ್ನಲಾಗಿದೆ.
 
ಕೋಮಲ್ ಮತ್ತು ಲೂಸ್ ಮಾದ ಬೈಕ್ ಸವಾರಿ ಮಾಡುತ್ತಿರುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ ಎಂದು ಚಿತ್ರದ ನಿರ್ಮಾಪಕ ಶಂಕರೇಗೌಡ ತಿಳಿಸಿದ್ದಾರೆ.
 
ಇಬ್ಬರು ನಟರು ಆಕ್ಷನ್ ಸ್ಟಂಟ್‌ ಮಾಡುವ ವೇಳೆ ಬೈಕ್‌ನಿಂದ ಕೆಳಗೆ ಬಿದ್ದಿದ್ದರಿಂದ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ