ನಟ ಪ್ರಭಾಸ್ – ದೀಪಿಕಾ ಪಡುಕೋಣೆ ಚಿತ್ರದಲ್ಲಿ ರಜನಿಕಾಂತ್ ?

ಗುರುವಾರ, 20 ಆಗಸ್ಟ್ 2020 (15:35 IST)
ನಟ ಪ್ರಭಾಸ್ – ನಟಿ ದೀಪಿಕಾ ಪಡುಕೋಣೆ ಅವರ ಹೊಸ ಚಿತ್ರದಲ್ಲಿ ರಜನಿಕಾಂತ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ.

ನಿರ್ದೇಶಕ ನಾಗ್ ಅಶ್ವಿನ್ ಅವರ ಮುಂದಿನ ಚಿತ್ರ ನಟ ಪ್ರಭಾಸ್-ದೀಪಿಕಾ ಪಡುಕೋಣೆ ನಟಿಸುತ್ತಿರುವ  ಪ್ಯಾನ್-ಇಂಡಿಯಾ ಚಿತ್ರವು ಸದ್ದು ಮಾಡತೊಡಗಿದೆ.

ಬಾಹುಬಲಿ ನಟ ಪ್ರಭಾಸ್ ಗೆ  ನಟಿ ದೀಪಿಕಾ ಪಡುಕೋಣೆ ಜೋಡಿಯಾಗಲಿದ್ದಾರೆ ಎಂದು ಚಿತ್ರ ನಿರ್ಮಾಪಕರು ಘೋಷಣೆ ಮಾಡಿದ್ದರು.

ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಮೆಗಾ ಬಜೆಟ್ ಚಿತ್ರ ವೈಜ್ಞಾನಿಕ ಥ್ರಿಲ್ಲರ್ ನಿಂದ ಕೂಡಿರಲಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ