ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟ 45 ನೇ ವರ್ಷದ ಸಂಭ್ರಮ
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಚಿತ್ರರಂಗದಲ್ಲಿ ಬಂದು 45 ವರ್ಷಗಳನ್ನು ಪೂರೈಸಿದ್ದಾರೆ.
ರಜನಿಕಾಂತ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದ ಹೇಳಿದ್ದಾರೆ. ಭಾವನಾತ್ಮಕ ಟಿಪ್ಪಣಿ ಬರೆದಿದ್ದಾರೆ.
ನನ್ನ ಸಿನಿಕಲಾವಿದನ ಪ್ರಯಾಣದ ನಲವತ್ತೈದನೇ ವಾರ್ಷಿಕೋತ್ಸವವನ್ನು ಸೂಚಿಸುವ ಈ ದಿನ, ನನ್ನನ್ನು ಸ್ವಾಗತಿಸಿದ ಎಲ್ಲ ಒಳ್ಳೆಯ ಹೃದಯಗಳಿಗೆ ಮತ್ತು ನನ್ನನ್ನು ಜೀವಂತವಾಗಿರಿಸಿಕೊಳ್ಳುವ ದೇವರುಗಳ ಅಭಿಮಾನಿ ಬಳಗಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮಗಾಗಿ ಇಲ್ಲದಿದ್ದರೆ ನಾನು ಇಲ್ಲಿ ಇರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.