ನಟಿ ಕಂಗನಾ ರಣಾವತ್ ಗೆ ವ್ಯಂಗ್ಯವಾಡಿದ ನಟ ಪ್ರಕಾಶ್ ರಾಜ್

ಸೋಮವಾರ, 14 ಸೆಪ್ಟಂಬರ್ 2020 (12:18 IST)
ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.

ಕಂಗನಾ ರಣಾವತ್ ಅವರು ತಮ್ಮನ್ನು ತಾವು ರಾಣಿ ಲಕ್ಷ್ಮಿ ಬಾಯಿ ಎಂದು ಕರೆದುಕೊಳ್ಳುತ್ತಾರೆ  ಎಂದು ಟಾಂಗ್ ನೀಡಿದ್ದಾರೆ.

ದಬಾಂಗ್ 2 ನಟ ಪ್ರಕಾಶ್ ರಾಜ್ ಅವರು ಕಂಗನಾ ರಣಾವತ್, ದೀಪಿಕಾ ಪಡುಕೋಣೆ, ಶಾರುಖ್ ಖಾನ್, ಹೃತಿಕ್ ರೋಷನ್, ಅಮೀರ್ ಖಾನ್ ಮತ್ತು ವಿವೇಕ್ ಒಬೆರಾಯ್ ಅವರನ್ನೊಳಗೊಂಡ ಒಂದು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಒಂದು ಚಿತ್ರ ಮಾಡಿ ಕಂಗನಾ ತಾನು ರಾಣಿ ಲಕ್ಷ್ಮಿ ಬಾಯಿ ಎಂದು ಭಾವಿಸಿದರೆ, ದೀಪಿಕಾ ಪದ್ಮಾವತಿ, ಹೃತಿಕ್ ಅಕ್ಬರ್, ಶಾರುಖ್ ಅಶೋಕ ಅಜಯ್ ಭಗತ್ ಸಿಂಗ್, ಅಮೀರ್ ಮಂಗಲ್ ಪಾಂಡೆ, ವಿವೇಕ್ ಮೋದಿ ಜಿ " ನಾ ಎಂದು ಟ್ವಿಟ್ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ