ನಟ ರಾಮ್‌ಚರಣ್‌ ದರ್ಗಾಕ್ಕೆ ಭೇಟಿ: ಟೀಕಾಕಾರರಿಗೆ ಪತ್ನಿ ಉಪಸನಾ ಕೌಂಟರ್‌

Sampriya

ಬುಧವಾರ, 20 ನವೆಂಬರ್ 2024 (18:54 IST)
Photo Courtesy X
ಖ್ಯಾತ ನಟ ರಾಮ್‌ ಚರಣ್ ಅವರು ಈಚೆಗೆ ದರ್ಗಾಕ್ಕೆ ಭೇಟಿ ನೀಡಿರುವ ಫೋಟೋ ವೈರಲ್ ಆಗಿದ್ದು, ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ಪತಿ ಬೆಂಬಲಕ್ಕೆ ಪತ್ನಿ ಉಪಸನಾ ನಿಂತಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ ಉಪಸನಾ ಅವರು ನಂಬಿಕೆ ಒಂದುಗೂಡಿಸುತ್ತದೆ ವಿನಃ ವಿಭಜಿಸುವುದಿಲ್ಲ ಎಂದು ಹೇಳಿದ್ದಾರೆ.

ರಾಮ್‌ಚರಣ್ ಅವರು ಈಚೆಗೆ 80ವರ್ಷ ಮುಷೈರ ಗಜಲ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲು ಕಡಪಕ್ಕೆ ತೆರಳಿದ್ದರು. ಮೊದಲು ವಿಜಯ ದುರ್ಗಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು ನಂತರ ಅಮೀರ್ ಪೀರ್ ದರ್ಗಾಕ್ಕೆ ಭೇಟಿ ನೀಡಿದರು.

ದರ್ಗಾದಲ್ಲಿ ರಾಮ್‌ಚರಣ್ ನಮಸ್ಕರಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಇದಕ್ಕೆ ಭಾರೀ ಟೀಕೆಯು ವ್ಯಕ್ತವಾಯಿತು.

ಇದೀಗ ಈ ವಿಚಾರವಾಗಿ ಉಪಸನಾ ತನ್ನ ಪತಿಯ ಬೆಂಬಲಕ್ಕೆ ನಿಂತಿದ್ದಾರೆ. "ನಂಬಿಕೆಯು ಒಂದುಗೂಡಿಸುತ್ತದೆ, ಎಂದಿಗೂ ವಿಭಜಿಸುವುದಿಲ್ಲ. ಭಾರತೀಯರಾಗಿ, ನಾವು ದೈವಿಕ (ಮಡಿಸಿದ ಕೈಗಳ ಎಮೋಜಿ) ಎಲ್ಲಾ ಮಾರ್ಗಗಳನ್ನು ಗೌರವಿಸುತ್ತೇವೆ ನಮ್ಮ ಶಕ್ತಿ ಏಕತೆಯಲ್ಲಿದೆ. (ರಾಷ್ಟ್ರೀಯ ಧ್ವಜ ಎಮೋಜಿ). #OneNationOneSpirit #jaihind. @AlwaysRamCharan ಅವರು ಅನುಸರಿಸುವಾಗ ಇತರ ಧರ್ಮಗಳನ್ನು ಗೌರವಿಸುತ್ತಾರೆ ಸ್ವಂತ (ಸೆಲ್ಯೂಟಿಂಗ್ ಫೇಸ್ ಎಮೋಜಿ)." ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ